ಸಂಕ್ರಾಂತಿ ಪ್ರಯುಕ್ತ ದರ್ಶನ್, ಧ್ರುವ ಹಾಗು ಗಣೇಶ್ ನಿಮ್ಮ ಮನೆಗೆ | Filmibeat Kannada

Filmibeat Kannada 2018-01-09

Views 432

ಸಂಕ್ರಾಂತಿ ಹಬ್ಬದ ವಿಶೇಷವಾಗಿ ಸ್ಯಾಂಡಲ್ ವುಡ್ ಗಿಂತ ಈ ಬಾರಿ ಕಿರುತೆರೆಯಲ್ಲೇ ಸಂಭ್ರಮ ಜೋರಾಗಿದೆ. ಡ್ಯಾನಿಶ್ ಸೇಠ್ ಅಭಿನಯದ 'ಹಂಬಲ್ ಪೊಲಿಟಿಶಿಯನ್ ನೊಗರಾಜ್' ಸಿನಿಮಾ ಈ ವಾರ ತೆರೆಕಾಣುತ್ತಿದ್ದು, ಸಂಕ್ರಾಂತಿ ಹಬ್ಬಕ್ಕೆ ಈ ಚಿತ್ರ ಉಡುಗೊರೆಯಾಗಿದೆ. ಇನ್ನು ಹಬ್ಬದ ಪ್ರಯುಕ್ತ ಸ್ಟಾರ್ ನಟರ ಸಿನಿಮಾಗಳ ಘೋಷಣೆಯಾಗುವುದು ಅನುಮಾನ. ಟೀಸರ್ ಮತ್ತು ಟ್ರೈಲರ್ ಗಳು ಬರುವುದು ಡೌಟ್. ಆದ್ರೆ, ಟಿವಿ ಪ್ರೇಕ್ಷಕರಿಗೆ ಮಾತ್ರ ಮಸ್ತ್ ಮನರಂಜನೆ. ಸುಗ್ಗಿ ಸಡಗರವನ್ನ ಹೆಚ್ಚಿಸಲು ಹೊಚ್ಚ ಹೊಸ ಚಲನಚಿತ್ರಗಳು ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಬಿಡುಗಡೆಯಾಗಿ, ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಿದ್ದ ಚಿತ್ರಗಳು ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಮೂಡಿಬರ್ತಿದೆ. ಈ ಮೂಲಕ ದೊಡ್ಡ ಪರದೆಯಲ್ಲಿ ಮಿಸ್ ಮಾಡಿಕೊಂಡಿದ್ದವರು ಮನೆಯಲ್ಲೇ ಕೂತು ಸಿನಿಮಾ ನೋಡಬಹುದು . ಈ ಎಲ್ಲ ಚಿತ್ರಗಳು ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಮೂಡಿ ಬರುತ್ತಿರುವುದರಿಂದ ವೀಕ್ಷಕರು ಫುಲ್ ಖುಷಿಯಾಗಿದ್ದಾರೆ

Though this there is no big movies releasing on this Sankranthi . Kannada movie lovers are not really sad about it . 3 brand new movies are coming on your TV screen to make your festive day more happening

Share This Video


Download

  
Report form
RELATED VIDEOS