ಟೆಲಿಕಾಂ ವಲಯದಲ್ಲಿ ಮತ್ತೊಂದು ದೊಡ್ಡ ಸುನಾಮಿಯೊಂದು ಎಳುವ ಸಾಧ್ಯತೆ ಇದೆ. ಇದೇ ಮೊದಲ ಬಾರಿಗೆ ರಿಲಯನ್ಸ್ ಮಾಲೀಕತ್ವದ ಜಿಯೋ ಪ್ರೈಮ್ ಸದಸ್ಯತ್ವವನ್ನು ಪಡೆದಿರುವ ಸದಸ್ಯರಿಗೆ ಆಚ್ಚರಿಯ ಕೊಡುಗೆಯನ್ನು ನೀಡಲು ಮುಂದಾಗಿದೆ. ಮತ್ತೊಮ್ಮೆ ತನ್ನ ಟ್ಯಾರಿಫ್ ಬೆಲೆಯಲ್ಲಿ ಕಡಿತವನ್ನು ಮಾಡಿದ್ದು, ಪ್ರತಿ GB ಡೇಟಾ ಬೆಲೆಯನ್ನು ಕಡಿಮೆ ಮಾಡುವುದಲ್ಲದೇ ಹೆಚ್ಚುವರಿ ಡೇಟಾವನ್ನು ನೀಡಲು ಮುಂದಾಗಿದೆ. ಮಾರುಕಟ್ಟೆಯ ತಜ್ಞರು ಜಿಯೋ ಹೊಸ ವರ್ಷದಲ್ಲಿ ತನ್ನ ಟ್ಯಾರಿಫ್ ಬೆಲೆಯನ್ನು ಏರಿಕೆ ಮಾಡಿಲಿದೆ ಎಂದು ಊಹಿಸಿದ್ದರು. ಆದರೆ ಇದನ್ನು ಬುಡಮೇಲು ಮಾಡಿರುವ ಅಂಬಾನಿ, ಜಿಯೋ ಎಲ್ಲಾ ಪ್ಲಾನ್‌ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಣೆ ಮಾಡಿದೆ. ಈ ಮೂಲಕ ಮತ್ತೊಮ್ಮೆ ಟೆಲಿಕಾಂ ವಲಯದಲ್ಲಿ ಕ್ರಾಂತಿಯನ್ನು ಎಬ್ಬಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.ಜಿಯೋ ಒಂದೇ ಕಲ್ಲಿನಲ್ಲಿ ಎಲ್ಲಾ ಟೆಲಕಾಂ ಕಂಪನಿಗಳನ್ನು ಉದುರಿಸಲು ಮುಂದಾಗಿದೆ. ಏರ್‌ಟೆಲ್, ಐಡಿಯಾ ಸೆಲ್ಯುಲಾರ್, ಮತ್ತು ವೊಡಾಫೋನ್ ಇಂಡಿಯಾ ಮುಂತಾದ ಟೆಲಿಕಾಂಗಳು ನೀಡಲಾಗದ ಆಫರ್ ಅನ್ನು ನೀಡಿದೆ ಎನ್ನಲಾಗಿದೆ.