ರಾಜಕೀಯದಲ್ಲಿ ಇತ್ತೀಚಿಗೆ ಬಹಳ ಹೊಸ ಹೊಸ ಬೆಳವಣಿಗೆಗಳು ಕಂಡು ಬರುತ್ತಿದೆ . ತಮಿಳಿನ ಸೂಪರ್ ಸ್ಟಾರ್ ರಜನೀಕಾಂತ್ ಕಡೆಗೂ ರಾಜಕೀಯ ಪ್ರವೇಶವನ್ನು ಖಚಿತಪಡಿಸಿದ್ದಾರೆ. ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಸ್ವತಂತ್ರ ಪಕ್ಷವನ್ನೇ ಘೋಷಿಸಿ ತಿಂಗಳಾಗುತ್ತಾ ಬಂದಿದೆ. ಆದರೆ ಬೇರೆ ಬೇರೆ ದಿಕ್ಕಿನಲ್ಲಿ ನಡೆದಿರೋ ಈ ರಾಜಕೀಯ ವಿದ್ಯಮಾನ ಒಂದೇ ಬಿಂದುವಿನಲ್ಲಿ ಸಂಧಿಸಲಿದೆಯಾ? ಸದ್ಯ ಹರಿದಾಡುತ್ತಿರೋ ಸೂಕ್ಷ್ಮ ಸುದ್ದಿಗಳ ಪ್ರಕಾರ ಅದು ನಿಜವಾಗೋ ಲಕ್ಷಣಗಳೇ ಹೆಚ್ಚಿವೆ . ಸದ್ಯಕ್ಕೆ ರಜನೀಕಾಂತ್ ತಮಿಳುನಾಡು ರಾಜ್ಯವನ್ನು ಮಾತ್ರವೇ ಕೇಂದ್ರವಾಗಿಟ್ಟುಕೊಂಡು ರಾಜಕೀಯವಾದ ಹೆಜ್ಜೆಯಿಡುತ್ತಿದ್ದಾರೆ. ಆದರೆ ಓರ್ವ ನಟನಾಗಿ ವಿಶ್ವಾಧ್ಯಂತ ಪ್ರಸಿದ್ಧಿ ಪಡೆದಿರೋ, ಭರಪೂರ ಗೆಲುವು ಕಂಡಿರೋ ಕನಸುಗಳು ಒಂದು ರಾಜ್ಯದ ಬೇಲಿಯೊಳಗೇ ಸುತ್ತಾಡಲು ಸಾಧ್ಯವಿಲ್ಲ. ಒಂದು ಮೂಲದ ಪ್ರಕಾರ ರಜನಿ ತಮ್ಮ ಹೊಸಾ ಪಕ್ಷ ಬೇರುಗಳನ್ನು ಗಟ್ಟಿ ಮಾಡಿಕೊಳ್ಳುವ ಸಲುವಾಗಷ್ಟೇ ರಾಜ್ಯದ ಪರಿಮಿತಿಯೊಳಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅವರ ಪ್ರಧಾನ ಟಾರ್ಗೆಟ್ ಇರೋದು ರಾಷ್ಟ್ರ ರಾಜಕಾರಣ ಎಂದು ಕೇಳಿಬರುತ್ತಿದೆ .
Rajinikanth has announced his political entry in style and speculations are that will the Superstar join hands with the real star and bring some big change ?