Rajkumar (Kannada: ಡಾ. ರಾಜಕುಮಾರ್), born as Singanalluru Puttaswamayya Muthuraju on April 24, 1929, died on April 12, 2006, was an actor and singer in Kannada film industry. He mainly worked in Karnataka and has won awards for his work."Dr. Raj" (popular name) with earned title "Natasarvabhouma" (meaning emperor of acting) retained popularity in both Karnataka and other Indian states. His primary view about his fans was "I don't know whether I will ever see God. But for me all those who are assembled here are my Gods. Fans call him "Annavru" (Kannada: ಅಣ್ಣಾವ್ರು, Big Brother) with affection. He acted in more than 200 Kannada movies in a career spanning over five decades. Most of his movies were epic films in Kannada film industry. He was also a well-known singer, as a playback singer as well as of devotional songs. His voice is referred as kogile kanta (the voice of a Koel) . Dr. Rajkumar's this Rare Video proves his Simplicity.
ನಾಯಕ ನಟರಾಗಿ ಅಭಿನಯಿಸಿದ ಮೊದಲ ಚಿತ್ರದಿಂದಲೇ ಕನ್ನಡ ಚಿತ್ರರಸಿಕರ ಮನಗೆದ್ದ ಪದ್ಮಭೂಷಣ, ರಸಿಕರ ರಾಜ, ಕೆಂಕಟಿಕರ್ನಲ್, ನಟಸಾರ್ವಭೌಮ ಡಾ. ರಾಜ್‌ಕುಮಾರ್, ಕನ್ನಡಿಗರೆಲ್ಲರ ಕಣ್ಮಣಿ. ಈಗ ವರನಟ ರಾಜ್ ನಮ್ಮೊಂದಿಗಿಲ್ಲ. ಆದರೆ, ಅವರ ನೆನಪು ಸದಾ ನಮ್ಮೊಂದಿಗಿದೆ. ಇದಕ್ಕೆ ಮುಖ್ಯ ಕಾರಣ ಅವರ ಚಿರಸ್ಮರಣೀಯ ಸಾಧನೆ.ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪಾತ್ರರಾದ ಮೇರು ನಟ. ವರನಟ, ನಟ ಸಾಮ್ರಾಟ, ಕನ್ನಡ ಚಿತ್ರರಸಿಕರ ಹೃದಯ ಸಿಂಹಾಸನಾಶ್ವರ. ತಮ್ಮ ಅಭಿಮಾನಿಗಳನ್ನೇ ದೇವರೆಂದು ತಿಳಿದ ರಾಜ್ ಸರಳತೆಯ ಸಾಕಾರಮೂರ್ತಿ. ವ್ಯಕ್ತಿಯಾಗಿ, ನಟರಾಗಿ ರಾಜ್ ಈ ನಾಡಿಗೆ ನೀಡಿರುವ ಕೊಡುಗೆ ಅಪಾರ.ಇನ್ನು ಡಾ ರಾಜ್ ಕುಮಾರ್ ದಂಪತಿಯ ಪದ ಪೂಜೆಯ ಈ ಅಪರೂಪದ ವಿಡಿಯೋ ನಿಮ್ಮನ್ನ ಬೆರಗುಗೊಳಿಸುತ್ತೆ . ಎವಿಎಂ ಲಾಂಛನದಲ್ಲಿ 1954ರಲ್ಲಿ ತೆರೆಕಂಡ ‘ಬೇಡರ ಕಣ್ಣಪ್ಪ’ ಮೂಲಕ ನಾಯಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ರಾಜ್, ನಾಯಕಿ ಪ್ರಧಾನವಾಗಿದ್ದ ಕನ್ನಡ ಚಿತ್ರರಂಗದಲ್ಲಿ ನಾಯಕ ಪ್ರಧಾನ ಶಕೆ ಆರಂಭಿಸಿದವರು.