Happy & Sad! | Interesting & Shocking Events of 2017 | 2017ರಲ್ಲಿ ನಡೆದ ಸಿಹಿ ಕಹಿ ಘಟನೆಗಳು

Oneindia Kannada 2017-12-30

Views 1

ಒಂದು ವರ್ಷ ಹೀಗೆ ನೋಡಿ, ಹಾಗೆ ಆಡುವುದರೊಳಗೆ ಮುಗಿದೇ ಹೋಯಿತು. ವರ್ಷಾಂತ್ಯದಲ್ಲಿ ನಿಂತು ಅದು, ಇದು ಎಂದು ನೆನಪುಗಳನ್ನು ಕೆದಕಿಕೊಂಡು ನಿಂತರೆ ಎಂಥ ಅಚ್ಚರಿಯ ಘಟನೆಗಳು ಕಣ್ಣುಗಳನ್ನು ತಾಗಿ, ಹೃದಯದೊಳಕ್ಕೆ ಇಳಿಯುತ್ತವೆ ಗೊತ್ತಾ? ಮೂನ್ನೂರಾ ಅರವತ್ತು ದಿನಗಳೂ ಒಂದಲ್ಲ ಒಂದು ಕಾರಣಕ್ಕ ಮುಖ್ಯವಾಗಿದ್ದವು. ಆದರೆ, ಕೆಲವು ಘಟನೆ- ವ್ಯಕ್ತಿಗಳು, ವಿಚಾರ ಬೆರಳ ತುದಿಗೆ ಅಂಟಿಕೊಂಡ ಚಿಟ್ಟೆಯ ಬಣ್ಣದಂತೆ, ಒಂದರಿಂದ ಮತ್ತೊಂದನ್ನು ಸ್ಪರ್ಶಿಸಿದಂತೆ ಅದ್ಭುತ ಅನುಭೂತಿ ನೀಡುತ್ತದೆ. ಅಂಥ ಕೆಲವನ್ನು ಫೋಟೋಗಳ ಮೂಲಕ ನಿಮ್ಮೆದುರು ತಂದು ನಿಲ್ಲಿಸಬೇಕು ಎಂಬುದು ನಮ್ಮ ಉದ್ದೇಶ. ಅವುಗಳನ್ನು ನೋಡಿದಾಗ ನಿಮಗೇನನ್ನಿಸಿತು ಎಂಬುದನ್ನು ನಮಗೂ ತಿಳಿಸಿ. ಪಿಟಿಐನಿಂದ ತುಂಬ ಚೆನ್ನಾಗಿ ಅಂಥ ಪ್ರಯತ್ನವಾಗಿದೆ. ಸೊಗಸಾದ ಫೋಟೋಗಳನ್ನು ಹಾಕಿದ್ದಾರೆ. ಅವುಗಳಲ್ಲೇ ಕೆಲ ನ್ನು ಆಯ್ದುಕೊಂಡಿದ್ದೇವೆ. ಕೆಲವೇ ಏಕೆಂದರೆ, ಅವುಗಳ ಜತೆಗೆ ನಮ್ಮದೂ ಒಂದು ಬೆಸುಗೆ ಇದೆ. ನೋಡಿದ ತಕ್ಷಣ ಭಾವ ತಂತುವೊಂದು ಮೀಟುತ್ತದೆ ಎಂಬುದೇ ಕಾರಣ.

Here is the best PTI pictures and Interesting events of 2017. Miss world 2017, Mumbai Rain, Bihar flood, Virat Kohli- Anushka Sharma marriage and other major events.

Share This Video


Download

  
Report form