ಸಮೀರ್ ಆಚಾರ್ಯ ಹಾಗು ಜೈ ಶ್ರೀನಿವಾಸನ್ ಈಗ ಕಿಂಗ್ ಮೇಕರ್ಸ್ | Oneindia Kannada

Filmibeat Kannada 2017-12-28

Views 624

Bigg Boss Kannada 5: Week 11: Sameer Acharya and Jayasreenivasan becomes king makers in 'Prajarajya' task. Sameer Acharya & Jayasreenivasan in the secret room watches all the contestants game plays.

'ಬಿಗ್ ಬಾಸ್' ಮನೆಯೊಳಗೆ ಏನೇನು ನಡೆಯುತ್ತಿದೆ, ಯಾರ್ಯಾರ ಗೇಮ್ ಪ್ಲಾನ್ ಏನೇನು, ಯಾರ ಜೊತೆ ಯಾರ್ಯಾರು ಹೇಗೆಲ್ಲ ನಡೆದುಕೊಳ್ಳುತ್ತಾರೆ ಎಂಬುದನ್ನೆಲ್ಲ ಸೂಕ್ಷ್ಮವಾಗಿ ಅರಿತುಕೊಳ್ಳಲು 'ಸೀಕ್ರೆಟ್ ರೂಮ್' ಉತ್ತಮ ಜಾಗ. ಹಾಗ್ನೋಡಿದ್ರೆ, 'ಬಿಗ್ ಬಾಸ್' ಮನೆ ಸದಸ್ಯರ ಅಸಲಿ ಮುಖ ಬಯಲಾಗುವುದೇ ಸೀಕ್ರೆಟ್ ರೂಮ್ ನಲ್ಲಿ.! ಇಂತಿಪ್ಪ ಸೀಕ್ರೆಟ್ ರೂಮ್ ಬಾಗಿಲನ್ನ ಹನ್ನೊಂದನೇ ವಾರದಲ್ಲಿ ತೆರೆದಿದ್ದಾರೆ 'ಬಿಗ್ ಬಾಸ್'. ದಿಢೀರ್ ಅಂತ ಜಯಶ್ರೀನಿವಾಸನ್ ಅವರನ್ನ ನಾಪತ್ತೆ ಮಾಡಿಸಿ, ಇದ್ದಕ್ಕಿದ್ದಂತೆ ಮಧ್ಯರಾತ್ರಿ ಸಮೀರಾಚಾರ್ಯ ರನ್ನ ಔಟ್ ಮಾಡಿಸಿ, ಇಬ್ಬರನ್ನೂ ಸೀಕ್ರೆಟ್ ರೂಮ್ ಒಳಗೆ ಕಳುಹಿಸಿದ್ದಾರೆ 'ಬಿಗ್ ಬಾಸ್'.'ಸೀಕ್ರೆಟ್ ರೂಮ್' ಒಳಗೆ ಎಲ್ಲರನ್ನ ಸೂಕ್ಷ್ಮವಾಗಿ ಗಮನಿಸುವುದು ಮಾತ್ರ ಜಯಶ್ರೀನಿವಾಸನ್ ಹಾಗೂ ಸಮೀರಾಚಾರ್ಯ ಕೆಲಸ ಅಲ್ಲ. ಅದರ ಜೊತೆಗೆ ಮನೆಯ ಸದಸ್ಯರಿಗೆ ಈ ವಾರ 'ಬಿಗ್ ಬಾಸ್' ನೀಡಿರುವ ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವ ಜವಾಬ್ದಾರಿ ಕೂಡ ಜಯಶ್ರೀನಿವಾಸನ್ ಹಾಗೂ ಸಮೀರಾಚಾರ್ಯ ಹೆಗಲ ಮೇಲಿದೆ. ಹೀಗಾಗಿ, 'ಬಿಗ್ ಬಾಸ್' ಮನೆಯ 'ಪ್ರಜಾರಾಜ್ಯ'ದಲ್ಲಿ ಸಮೀರಾಚಾರ್ಯ ಹಾಗೂ ಜಯಶ್ರೀನಿವಾಸನ್ 'ಕಿಂಗ್ ಮೇಕರ್ಸ್' ಆಗಿದ್ದಾರೆ.

Share This Video


Download

  
Report form
RELATED VIDEOS