How to Sharing a Mobile Data Connection with Your PC
ಸ್ಮಾರ್ಟ್‌ಫೋನ್‌ನಿಂದ ಕಂಪ್ಯೂಟರ್‌ಗೆ ಇಂಟರ್ನೆಟ್ ಕನೆಷನ್ ಪಡೆಯುವುದು ಹೇಗೆ..?
ಇಂದಿನ ದಿನದಲ್ಲಿ ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ದರ ಸಮರದ ಕಾವು ಹೆಚ್ಚಾಗಿದ್ದು, ಪ್ರತಿ ಟೆಲಿಕಾಂ ಕಂಪನಿಗಳು ದಿನಕ್ಕೊಂದು ಹೊಸ ಪ್ಲಾನ್‌ಗಳನ್ನು ಬಿಡುಗಡೆ ಮಾಡುತ್ತಿದೆ. 4G ವೇಗದ ಡೇಟಾ ಅತೀ ಕಡಿಮೆ ಬೆಲೆಗೆ ದೊರೆಯುತ್ತಿದೆ. ಬ್ರಾಡ್ ಬ್ಯಾಂಡ್ ಗೆ ಹೋಲಿಕೆ ಮಾಡಿಕೊಂಡರೆ ಮೊಬೈಲ್ ಡೇಟಾ ದರ ಕಡಿಮೆ ಇದೆ, ಅಲ್ಲದೇ ವೇಗವನ್ನು ಹೊಂದಿದೆ.
ಈ ಹಿನ್ನಲೆಯಲ್ಲಿ ಮೊಬೈಲ್ ಅನ್ನು ಕಂಪ್ಯೂಟರ್ ನೊಂದಿಗೆ ಸಂಪರ್ಕಿಸಿಕೊಂಡು ಇಂಟರ್ನೆಟ್ ಸೇವೆಯನ್ನು ಪಡೆಯಬಹುದಾಗಿದೆ. ನಿಮಗೆ ಸ್ಮಾರ್ಟ್‌ಫೋನ್‌ನಿಂದ ಲಾಪ್‌ಟಾಪ್‌ಗೆ ಯಾವ ಮಾದರಿಯಲ್ಲಿ ಡೇಟಾವನ್ನು ಪಡೆಯಬಹುದು ಎಂಬುದು ತಿಳಿದಿದೆ ಆದರೆ ನಿಮ್ಮ ಪರ್ನಸಲ್ ಕಂಪ್ಯೂಟರ್‌ಗೆ ಹೇಗೆ ಪಡೆಯುವುದ ಎನ್ನುವುದನ್ನು ತಿಳಿಸುವ ಪ್ರಯತ್ನ ಇದಾಗಿದೆ.