Kannada Actor Chetan's statement in Mahadayi protest was opposed by the kannada stars ,talking about artists has been opposed on the social networking site.
ಬೆಂಗಳೂರಿನಲ್ಲಿ ನಡೆಯುತ್ತಿರುವ ಮಹದಾಯಿ ನೀರಿನ ಹಂಚಿಯ ಹೋರಾಟದ ಕಾವು ಹೆಚ್ಚಾಗಿದೆ. ಎರಡು ವರ್ಷದ ಹಿಂದೆ ಹುಬ್ಬಳ್ಳಿಗೆ ಹೋಗಿ ಹೋರಾಟ ಮಾಡಿದ್ದ ಸಿನಿಮಾರಂಗದ ತಾರೆಯರು ಈಗಲೂ ರೈತರಿಗೆ ಬೆಂಬಲ ಸೂಚಿಸುತ್ತಿದ್ದಾರೆ. ನಟ ಶಿವರಾಜ್ ಕುಮಾರ್ , ಉಪೇಂದ್ರ, ಗಣೇಶ್, ಯಶ್ ಇನ್ನೂ ಅನೇಕರು ನಾವು ರೈತರ ಹೋರಾಟದಲ್ಲಿ ಭಾಗಿಯಾಗಲು ಸಿದ್ಧವಾಗಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.ನಿನ್ನೆಯ ಪ್ರತಿಭಟನೆಯಲ್ಲಿ ಸಾಕಷ್ಟು ಕಲಾವಿದರು ಹಾಗೂ ತಂತ್ರಜ್ಞರು ರೈತರ ಜೊತೆ ಕೂತು ನ್ಯಾಯಕ್ಕಾಗಿ ಪ್ರತಿಭಟನೆ ಮಾಡಿದ್ದಾರೆ. ಹೋರಾಟದಲ್ಲಿ ಮಾತನಾಡಿನ 'ಆ ದಿನಗಳು' ಸಿನಿಮಾ ಖ್ಯಾತಿಯ ನಟ ಚೇತನ್ 'ಚಿತ್ರರಂಗದ ಕಲಾವಿದರು ಹೋರಾಟಕ್ಕೆ ಬರಬೇಕು, ಮೂರು ದಿನವಾದರೂ ಕಲಾವಿದರು ಕಾಣಿಸಿಕೊಳ್ಳುತ್ತಿಲ್ಲ' ಎಂದು ಹೇಳಿಕೆ ನೀಡಿದ್ದರು. ಆದರೆ ಇದೀಗ ಚೇತನ್ ಮಾತಿಗೆ ಚಿತ್ರರಂಗದ ಅನೇಕರು ವಿರೋಧ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.