ಅಗ್ನಿಸಾಕ್ಷಿ ಸಿದ್ಧಾರ್ಥ್ ಗೆ ಚಾಲೆಂಜ್ ಹಾಕಿದ ಸನ್ನಿಧಿ | Oneindia Kannada

Filmibeat Kannada 2017-12-22

Views 2

'Agnisakshi' serial Actress Vaishnavi Gowda hosting 'Star Suvarna's new reality show 'Bharjari Comedy'. another side Agnisakshi actor Vijay Suriya also hosting Colors Kannada's Comedy Talkies in weekends.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ 'ಅಗ್ನಿಸಾಕ್ಷಿ'ಯ ಸಿದ್ಧಾರ್ಥ್ ಮತ್ತು ಸನ್ನಿಧಿ ಜೋಡಿ ಯಾರಿಗೆ ಇಷ್ಟವಾಗಲ್ಲ ಹೇಳಿ. ಇವರಿಬ್ಬರ ರೀತಿ ನಾವು ಇರ್ಬೇಕು ಎನ್ನುವುದು ಅದೇಷ್ಟೋ ಜೋಡಿಗಳ ಆಸೆ ಕೂಡ. ಆದ್ರೀಗ, ಇವರಿಬ್ಬರು ಹೊಸ ಸ್ಪರ್ಧೆಗೆ ಸಿದ್ದವಾಗಿದ್ದಾರೆ. ಅರೇ, ನಾವ್ ಹೇಳ್ತಿರೋದು ಧಾರಾವಾಹಿ ಕಥೆಯಲ್ಲ. ಇದು ರಿಯಾಲಿಟಿ ಶೋ ಕಥೆ. ಹೌದು, ಪ್ರತಿದಿನ 'ಅಗ್ನಿಸಾಕ್ಷಿ'ಯಲ್ಲಿ ಇವರಿಬ್ಬರ ಪ್ರೀತಿ, ವಾತ್ಯಲ್ಯ ನೋಡಿ ಖುಷಿ ಪಡುವ ಪ್ರೇಕ್ಷಕರು, ವಾರಾಂತ್ಯದಲ್ಲಿ ಇವರಿಬ್ಬರಲ್ಲಿ ಯಾರು ಉತ್ತಮ, ಯಾರ ಕಾರ್ಯಕ್ರಮ ಚೆನ್ನಾಗಿದೆ? ಎಂಬ ಚರ್ಚೆ ಮಾಡಬೇಕಿದೆ. ಇನ್ನು ಅರ್ಥವಾಗಿಲ್ವಾ. ಸಿದ್ಧಾರ್ಥ್ ಅಲಿಯಾಸ್ ವಿಜಯ್ ಸೂರ್ಯ ಕಲರ್ಸ್ ಕನ್ನಡದಲ್ಲಿ 'ಕಾಮಿಡಿ ಟಾಕೀಸ್' ನಿರೂಪಣೆ ಮಾಡ್ತಿದ್ದಾರೆ. ಅದಕ್ಕೆ ಸ್ಪರ್ಧೆ ನೀಡಲು ಸನ್ನಿಧಿ ಖ್ಯಾತಿಯ ವೈಷ್ಣವಿ ಕೂಡ ಹೊಸ ಹೆಜ್ಜೆ ಇಟ್ಟಿದ್ದಾರೆ. ಹೀಗಾಗಿ, ಇನ್ಮುಂದೆ ವೀಕೆಂಡ್ ನಲ್ಲಿ ವಿಜಯ್ ಸೂರ್ಯ ಮತ್ತು ವೈಷ್ಣವಿಯ ರಿಯಲ್ ಫೈಟ್ ನೋಡಬಹುದು.

Share This Video


Download

  
Report form
RELATED VIDEOS