ಬದುಕಿರುವ ಶಶಿಕಲಾ ನಟರಾಜನ್ ರನ್ನ ಸಾಯಿಸಿದ ಇಮ್ರಾನ್ ಖಾನ್ | Oneindia Kannada

Oneindia Kannada 2017-12-20

Views 1.8K

Pakistan Tehreek-e-Insaf leader Imran Khan, cricketer turned politician, becomes a subject of debate now. One of his tweets, he quoted, Sasikala Natarajan as an actor turned politician, who recently "died"! Instead of Jayalalitha, he confusingly used Sasikala Natarajan's name, who is in Bengaluru's Parappana Agrahara jail now.


"ಶಶಿಕಲಾ, ರಾಜಕಾರಣಿಯಾಗಿ ಬದಲಾದ ದಕ್ಷಿಣ ಭಾರತದ ಪ್ರಸಿದ್ಧ ನಟಿ. ಇತ್ತೀಚೆಗಷ್ಟೇ ಅಸುನೀಗಿದ ತಮಿಳುನಾಡಿನ ಈ ರಾಜಕಾರಣಿಯ ಮನೆಯಲ್ಲಿ ಸಿಕ್ಕ ಚಿನ್ನ, ಒಡವೆ, ಅಕ್ರಮ ಸಂಪತ್ತಿನ ಚಿತ್ರ ಇಲ್ಲಿದೆ. ಇದು ಎಲ್ಲಾ ಭ್ರಷ್ಟ ರಾಜಕಾರಣಿಗಳಿಗೆ ಒಂದು ಸಂದೇಶ..." ಹೀಗೆಂದು ಟ್ವೀಟ್ ಮಾಡಿದವರು ಪಾಕಿಸ್ತಾನದ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್! ಪಾಕಿಸ್ತಾನದ ಮಾಜಿ ಕ್ರಿಕೆಟಿಗರೂ ಆಗಿರುವ ಇಮ್ರಾನ್ ಖಾನ್ ಇಂಥದೊಂದು ಪ್ರಮಾದ ಮಾಡಿರುವ ಕುರಿತು ಇದೀಗ ಟ್ವಿಟ್ಟರ್ ನಲ್ಲಿ ಹಸಿ ಬಿಸಿ ಚರ್ಚೆ ನಡೆಯುತ್ತಿದೆ. ಜಯಲಲಿತಾ ಎಂದು ಬರೆಯುವುದಕ್ಕೆ ಶಶಿಕಲಾ ಎಂದು ಬರೆಯುವ ಮೂಲಕ, ಬದುಕಿರುವ ಶಶಿಕಲಾರನ್ನು ಅಕ್ಷರಗಳ ಮೂಲಕ ಸಾಯಿಸಿರುವ ಖಾನ್ ಅವರ ನಡೆ ಅವರನ್ನು ನಗೆಪಾಟಲಿಗೀಡಾಗುವಂತೆ ಮಾಡಿದೆ.ಪಾಕಿಸ್ತಾನದ ಭ್ರಷ್ಟ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ್ದ ಇಮ್ರಾನ್ ಖಾನ್, ಇಲ್ಲಿನ ರಾಜಕೀಯ ನಾಯಕರಲ್ಲಿ ಮುಂಚೂಣಿಯಲ್ಲಿರುವವರು. ಕಿಂಥ ಉನ್ನತ ಸ್ಥಾನದಲ್ಲಿರುವವರು ಸತ್ಯ ತಿಳಿಯದೆ, ಬೇಜವಾಬ್ದಾರಿಯಾಗಿ ಹೀಗೆಲ್ಲ ಟ್ವೀಟ್ ಮಾಡುವುದು ಸರೀನಾ ಎಂಬುದು ಈಗಿರುವ ಪ್ರಶ್ನೆ.

Share This Video


Download

  
Report form
RELATED VIDEOS