Gujarat assembly elections 2017 : Congress social media and digital media head Ramya akd Divya Spandana has congratulated BJP and has said Congress has not given up and will fight further. That's the spirit Ramya, keep it up.
"ಅಭಿನಂದನೆಗಳು ಭಾರತೀಯ ಜನತಾ ಪಕ್ಷ, ನಾವಿನ್ನೂ ಬಿಟ್ಟುಕೊಟ್ಟಿಲ್ಲ, ನಮ್ಮ ಹೋರಾಟ ಹೀಗೆಯೇ ಮುಂದುವರಿಯಲಿದೆ..." ಹೀಗೆಂದು ಟ್ವೀಟ್ ಮಾಡಿದವರು, ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಅಕಾ ದಿವ್ಯಾ ಸ್ಪಂದನಾ.ದಿವ್ಯಾ ಸ್ಪಂದನಾ ಅವರ ಈ ಹೇಳಿಕೆಗೆ ಟ್ವಿಟ್ಟರಿನಲ್ಲಿ ಭಾರೀ ಪ್ರತಿಸ್ಪಂದನೆ ವ್ಯಕ್ತವಾಗುತ್ತಿದೆ. ಕೆಲವರು ಅವರ ಸ್ಫೂರ್ತಿಯುತ ಹೇಳಿಕೆಗೆ ಶಭಾಸ್ ಎಂದಿದ್ದರೆ, ಮತ್ತೆ ಕೆಲವರು ಎಂದಿನಂತೆ ಕೆಣಕುವ, ಕಾಲೆಳೆಯುವಂಥ ಮಾತನ್ನಾಡಿದ್ದಾರೆ. ಈ ಎಲ್ಲ ಪ್ರತಿಸ್ಪಂದನೆಗೆ ರಮ್ಯಾ ಅವರದು ಮೌನವೇ ಉತ್ತರ.ಗುಜರಾತ್ ನಲ್ಲಿ ಕಾಂಗ್ರೆಸ್ ಸೋತಿದ್ದರೂ ವೀರೋಚಿತ ಸೋಲು ಕಂಡಿದೆ. ಕಳೆದ ಚುನಾವಣೆಯಲ್ಲಿ ಕೇವಲ 61 ಸ್ಥಾನ ಗಳಿಸಿದ್ದ ಕಾಂಗ್ರೆಸ್ ತನ್ನ ಎಣಿಕೆಯನ್ನು 81ಕ್ಕೆ ಹೆಚ್ಚಿಸಿಕೊಂಡಿರುವುದು ಸಣ್ಣ ಮಾತಲ್ಲ. ಕಾಂಗ್ರೆಸ್ ನಾಯಕರೆಲ್ಲರೂ ತಲೆಯೆತ್ತಿ, ಎದೆತಟ್ಟಿಕೊಂಡು ಸ್ವೀಕರಿಸಬೇಕಾದ ಫಲಿತಾಂಶವಿದು.ಸೋಲಿಗೆ ಪ್ರತಿಕ್ರಿಯಿಸಲು ಹಿಂದೇಟು ಹಾಕಿದರೆ, ಕಾಂಗ್ರೆಸ್ಸಿಗೆ ಮತ ಹಾಕಿದ ಶೇ.41.4ರಷ್ಟು ಗುಜರಾತಿನ ಜನತೆಗೆ ಅವಮಾನ ಮಾಡಿದಂತೆ. ಕಾಂಗ್ರೆಸ್ ಈ ಬಾರಿ ಭರ್ಜರಿಯಾಗಿ ಪ್ರಚಾರ ಮಾಡಿತ್ತು, ನಗರ ಪ್ರದೇಶದ ಜನರನ್ನು ಮಾತ್ರವಲ್ಲ, ಗ್ರಾಮೀಣ ಪ್ರದೇಶದ ಜನತೆಯ ವಿಶ್ವಾಸ ಗಿಟ್ಟಿಸಲು ಸಫಲವಾಗಿದೆ.