"ಕಾಂಗ್ರೆಸ್ ಕಾರ್ಯಕರ್ತರ ರಕ್ಷಣೆಯೇ ನನ್ನ ಮೊದಲ ಆಧ್ಯತೆ. ಜನರನ್ನು ಬಿಜೆಪಿ ವಿಭಜಿಸುತ್ತದೆ ಆದರೆ, ಕಾಂಗ್ರೆಸ್ ಪ್ರೀತಿಸುತ್ತದೆ" ಎಂದು ನೂತನ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಅಧಿಕಾರ ಸ್ವೀಕರಿಸಿದ ಬಳಿಕ ತಮ್ಮ ಮೊದಲ ಭಾಷಣದಲ್ಲಿ ಪ್ರಧಾನಿ ನರೇಂಧ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.ಈವರೆಗೆ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದ್ದ ಸೋನಿಯಾ ಗಾಂಧಿಯವರು ತಮ್ಮ ಪುತ್ರ ರಾಹುಲ್ ಗಾಂಧಿಗೆ ನವದೆಹಲಿಯಲ್ಲಿಂದು (ಡಿ.16) ಎಐಸಿಸಿ ಕಚೇರಿಯಲ್ಲಿ ಅಧಿಕಾರ ಹಸ್ತಾಂತರಿಸಿದರು. ಅಧಿಕಾರ ಸ್ವೀಕರಿಸಿದ ರಾಹುಲ್ ಗಾಂಧಿ ಮಾತನಾಡಿದ ಭಾಷಣದ ಮುಖ್ಯಾಂಶಗಳು ಇಲ್ಲಿವೆ.ರಾಜಕಾರಣ ಎಂದರೆ ಜನರ ಸೇವೆ ಮಾಡುವುದು. ಬಿಜೆಪಿ ಪ್ರಕಾರ ಜನರನ್ನು ವಿಭಜಿಸುವುದೇ ರಾಜಕಾರಣ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.ಆಹಾರದ ವಿಷಯದಲ್ಲಿ ಜನರನ್ನು ಕತ್ತರಿಸಿ ಹಾಕಲಾಗುತ್ತಿದ್ದು, ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ .ಕಾಂಗ್ರೆಸ್ ಕಾರ್ಯಕರ್ತರ ರಕ್ಷಣೆಯೇ ನನ್ನ ಮೊದಲ ಆಧ್ಯತೆ.