ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ವಿವಾಹ ಇಟಲಿಯಲ್ಲಿ ಅದ್ಧೂರಿಯಾಗಿ ನೆರವೇರಿದ್ದು, ನವಬಾಳಿಗೆ ಕಾಲಿಟ್ಟಿದ್ದಾರೆ. ಸಂಪ್ರದಾಯವಾಗಿ ಬಂದು-ಮಿತ್ರರ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಪ್ರವೇಶ ಮಾಡಿದ ನವಜೋಡಿಗೆ ಎಲ್ಲಡೆ ಶುಭಾಶಯಗಳು ಹರಿದು ಬರ್ತಿದೆ. ಈ ಮಧ್ಯೆ ಅನುಷ್ಕಾ ಮತ್ತು ವಿರಾಟ್ ಮದುವೆ ಒಂದು ವಿಷ್ಯಕ್ಕೆ ಹೆಚ್ಚು ಸುದ್ದಿಯಾಗಿದೆ. ಅದೇನಪ್ಪಾ ಅಂದ್ರೆ, ತನ್ನ ನೆಚ್ಚಿನ ಮಡದಿಗೆ ವಿರಾಟ್ ಕೊಹ್ಲಿ ತೊಡಿಸಿರುವ ಉಂಗುರದ ಬೆಲೆ.ಅನುಷ್ಕಾ ಶರ್ಮಾ ಅವರಿಗೆ ವಿರಾಟ್ ಕೊಹ್ಲಿ ಈ ಡೈಮೆಂಟ್ ಉಂಗುರವನ್ನ ವಿಶೇಷವಾಗಿ ತಯಾರಿಸಿದ್ದು, ಈ ಉಂಗುರವನ್ನ ಆಸ್ಟ್ರೇಲಿಯಾ ವಿನ್ಯಾಸಕಾರರಿಂದ ಸಿದ್ದಪಡಿಸಿದ್ದಾರೆ. ಇದಕ್ಕಾಗಿ ವಿರಾಟ್ ಸುಮಾರು 1 ಕೋಟಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಅಂದ್ಹಾಗೆ, ಈ ಲವ್ ಬರ್ಡ್ಸ್ ಡಿಸೆಂಬರ್ 11 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಿಸೆಂಬರ್ 21 ರಂದು ದೆಹಲಿಯಲ್ಲಿ ಹಾಗೂ ಡಿಸೆಂಬರ್ 26 ರಂದು ಮುಂಬೈನಲ್ಲಿ ನೂತನ ದಂಪತಿಯ ಆರತಕ್ಷತೆ ಅಯೋಜಿಸಲಾಗಿದೆ.
Virat Kohli spent a considerable time behind finalizing on the ring worth Rs. 1 crore. Virat Kohli gifts a Diamond Ring worth Rs. 1 Crore.