ಬೆಂಗಳೂರು, ಡಿಸೆಂಬರ್. 14 : ಗುಜರಾತ್ ವಿಧಾನಸಭೆ ಚುನಾವಣೆ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ರಿಪಬ್ಲಿಕ್ ಟಿವಿ ಮತ್ತು ಸಿ-ವೋಟರ್ ಜಂಟಿಯಾಗಿ ನಡೆಸಿದ ಸಮೀಕ್ಷೆಯ ವಿವರ ಇಲ್ಲಿದೆ. ಗುರುವಾರ ಸಂಜೆ 5 ಗಂಟೆಗೆ ಮತದಾನ ಮುಗಿದಿದ್ದು, ಚುನಾವಣೋತ್ತರ ಫಲಿತಾಂಶ ಪ್ರಕಟಗೊಂಡಿದೆ. 182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿ.9 ಮತ್ತು 14ರಂದು ಚುನಾವಣೆ ನಡೆದಿತ್ತು. ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 92.ರಿಪಬ್ಲಿಕ್ ಟಿವಿ, ಸಿ-ವೋಟರ್ ಸಮೀಕ್ಷೆಯ ಸದ್ಯದ ಫಲಿತಾಂಶದಂತೆ ಬಿಜೆಪಿ 108, ಕಾಂಗ್ರೆಸ್ 74, ಇತರೆ 0 ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ಸದ್ಯ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿಯೂ ಸ್ಪಷ್ಟ ಬಹುಮತ ಪಡೆಯಲಿದೆ.ಗುಜರಾತ್‌ನಲ್ಲಿ ವಿವಿಧ ಪಕ್ಷಗಳ ಮತಗಳ ಹಂಚಿಕೆ ವಿವರಗಳು ಸಮೀಕ್ಷೆಯ ಪ್ರಕಾರ ಹೀಗಿವೆ. 2012ರಲ್ಲಿ ಬಿಜೆಪಿ 47.8, ಕಾಂಗ್ರೆಸ್ 38.8 ಮತ್ತು ಇತರೆ ಪಕ್ಷಗಳು 13.4ರಷ್ಟು ಮತಗಳನ್ನು ಪಡೆದಿದ್ದವು.2017ರ ಚುನಾವಣೆಯಲ್ಲಿ ಬಿಜೆಪಿ 47.4, ಕಾಂಗ್ರೆಸ್ 43.3, ಇತರೆ ಪಕ್ಷಗಳು 9.3ರಷ್ಟು ಮತಗಳನ್ನು ಪಡೆಯಲಿವೆ. ಯಾವ ಭಾಗದಲ್ಲಿ ಎಷ್ಟು ಸ್ಥಾನ? : ದಕ್ಷಿಣ ಗುಜರಾತ್ : ದಕ್ಷಿಣ ಗುಜರಾತ್ ಭಾಗದಲ್ಲಿ ಬಿಜೆಪಿ 19, ಕಾಂಗ್ರೆಸ್ 14 ಮತ್ತು ಇತರೆ 0 ಕ್ಷೇತ್ರಗಳಲ್ಲಿ ಗೆಲುವು ಸಾಧಿಸದಲಿದೆ.
Results of Gujarat Exit Poll 2017 are out now. Read latest updates related to exit poll done by Republic tv and C-Voter exit poll. BJP and Congress are major parties here.