ಕನ್ನಡ ನಟ ಸುದೀಪ್ ರೈತರಿಗೆ ಸಹಾಯ ಮಾಡಲು ಹೀಗ್ ಮಾಡಿದ್ರಾ? | Filmibeat Kannada

Filmibeat Kannada 2017-12-14

Views 2.3K

Actor Sudeep has come forward to help the farmers and Sudeep, who was involved in the V Respect Farmers Trust, has offered to sell his car and pay the trust.


ಕಿಚ್ಚ ಸುದೀಪ್ ಬಡವರಿಗೆ ಹಾಗೂ ಕಷ್ಟದಲ್ಲಿರುವವರ ಪಾಲಿಗೆ ಆಶಾಕಿರಣ ಆಗುತ್ತಾರೆ ಅನ್ನೋದನ್ನ ಮತ್ತೆ ನಿರೂಪಿಸಿದ್ದಾರೆ. ಸದಾ ಒಂದಲ್ಲ ಒಂದು ಉಪಯುಕ್ತವಾಗುವಂತಹ ಕೆಲಸಗಳನ್ನ ಮಾಡಿ ವಾವ್ಹ್ ಕಿಚ್ಚ ಎನ್ನುವ ಭಾವನೆ ಮೂಡಿಸೋ ಸುದೀಪ್ ರೈತರ ಸಂಕಷ್ಟದಲ್ಲಿ ಪಾಲುದಾರರಾಗಿದ್ದಾರೆ. 'ವಿ ರೆಸ್ಪೆಕ್ಟ್ ಫಾರ್ಮರ್ಸ್ ಟ್ರಸ್ಟ್' ರೈತ ಸ್ನೇಹಿ ಯೋಜನೆಯ ಲಾಂಛನ ಲೋಕಾರ್ಪಣೆ ಹಾಗೂ ಸಾರ್ಥಕ ನೇಗಿಲ ಯೋಗಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನ ಇಂದು (ಡಿ.13) ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ನಟ ಕಿಚ್ಚ ಸುದೀಪ್ ಕಾರ್ಯಕ್ರಮದಲ್ಲಿ ಭಾಗಿಯಾಗಿ 'ವಿ ರೆಸ್ಪೆಕ್ಟ್ ಫಾರ್ಮರ್ಸ್ ಟ್ರಸ್ಟ್' ನ ಲೋಗೋವನ್ನ ಬಿಡುಗಡೆ ಮಾಡಿದ್ರು.
ಇದೇ ಸಮಯದಲ್ಲಿ ರೈತರ ಬಗ್ಗೆ ಮಾತನಾಡಿದ ಅಭಿನಯ ಚಕ್ರವರ್ತಿ ಸುದೀಪ್ "ಸಾಮಾನ್ಯವಾಗಿ ಕಲಾವಿದರಾದ ನಾವುಗಳು ಇಂತಹ ಕಾರ್ಯಕ್ರಮಕ್ಕೆ ಅಥಿತಿಗಳಂತೆ ಬಂದು ಹೋಗಿ ಬಿಡುತ್ತೇವೆ. ರೈತರ ಕಷ್ಟ ಮಾತ್ರ ಹಾಗೆಯೇ ಇರುತ್ತೆ. ನನಗೆ ರೈತರಿಗೆ ಹೇಗೆ ಸಹಾಯ ಮಾಡಬೇಕೆಂದು ತಿಳಿಯುತ್ತಿಲ್ಲ. ಆದರೆ ನನ್ನ ಬಳಿ ಕಾರ್ ಗಳಿವೆ ಅದರಲ್ಲಿ ನಾನು ಅತ್ಯಂತ ಪ್ರೀತಿ ಮಾಡೋ 'ಬಿ ಎಂ ಡ್ಲ್ಯೂ' ಕಾರನ್ನ ಮಾರಾಟ ಮಾಡಿ ಅದರಿಂದ ಬಂದ ಹಣವನ್ನ 'ವಿ ರೆಸ್ಪೆಕ್ಟ್ ಫಾರ್ಮರ್ಸ್ ಟ್ರಸ್ಟ್' ಗೆ ನೀಡುತ್ತೇನೆ" ಎಂದು ತಿಳಿಸಿದ್ದಾರೆ.

Share This Video


Download

  
Report form
RELATED VIDEOS