Here is a dental clinic which looks same like a forest! To make children happy while visiting the hospital the clinic is designed like a forest. The name of the hospital is Vatsalya Dental-dento Jungle. It is in JP Nagar Bengaluru.
ದಂತ ವೈದ್ಯರನ್ನು ಭೇಟಿ ಮಾಡೋದು ಅಂದ್ರೆ ಚಿಕ್ಕ ಮಕ್ಕಳಿಗೆ ಹೋಗಲಿ,
ದೊಡ್ಡವರಿಗೂ ಭಯವೇ. ಅದಕ್ಕೆಂದೇ ಎಷ್ಟೋ ಜನ ಹಲ್ಲು ಪೂರ್ತಿ ಹಾಳಾಗುವವರೆಗೂ ಡೆಂಟಿಸ್ಟ್ ಗಳ ಬಳಿ ಹೋಗದೆ ಸುಮ್ಮನೆ ಕೂರುವುದುಂಟು. ಆದರೆ ಡೆಂಟಿಸ್ಟ್ ಗಳ ಬಳಿ ಹೋಗುವುದಕ್ಕೆ ಭಯಪಡುವ ಬದಲು ಅತ್ಯಂತ ಖುಷಿಯಿಂದ ರೋಗಿಗಳು ಬರುವಂತಾಗಬೇಕೆಂಬ ಕಾರಣಕ್ಕೆ ಬೆಂಗಳೂರಿನ ಜೆಪಿ ನಗರದಲ್ಲಿ 'ವಾತ್ಸಲ್ಯ ಡೆಂಟಲ್-ಡೆಂಟೋ ಜಂಗಲ್' ಹೆಸರಿನಲ್ಲಿ ಕ್ಲಿನಿಕ್ ವೊಂದು ತಲೆಯೆತ್ತಿದೆ.ಮುಖ್ಯವಾಗಿ ಚಿಕ್ಕ ಮಕ್ಕಳಲ್ಲಿ ಡೆಂಟಲ್ ಕ್ಲಿನಿಕ್ ಗಳ ಬಗ್ಗೆ ಭಯ ಹೋಗಲಾಡಿಸುವ ಉದ್ದೇಶ ಈ ಕ್ಲಿನಿಕ್ ನದ್ದು. ಈ ಕ್ಲಿನಿಕ್ ನ ವಿಶೇಷತೆ ಏನಂದ್ರೆ, ಇದು ಪಕ್ಕಾ ಕಾಡಿನ ಹಾಗೇ ಇದೆ! ಹೌದು, ಕಾಡಿನ ವಾತಾವರಣವನ್ನೇ ಇಲ್ಲಿ ಬಿಂಬಿಸಲಾಗಿದೆ.ನಿಕ್ ಗೆ ಅಡಿಯಿಡುತ್ತಿದ್ದಂತೆಯೇ ದೈತ್ಯ ಗೋರಿಲ್ಲಾವೊಂದು ನಿಮ್ಮನ್ನು ಸ್ವಾಗತಿಸುತ್ತದೆ. ನಂತರ ಬಸ್ಸಿನ ಆಕಾರದ ರೂಮುಗಳು, ಎಲ್ಲೆಲ್ಲೂ ಬೆಳೆದು ನಿಂತ ಮರದ ಆಕೃತಿ, ಬಣ್ಣ ಬಣ್ಣದ ಚಿತ್ತಾರ... ಈ ಎಲ್ಲವೂ, ಭೇಟಿ ನೀಡುವ ಮಕ್ಕಳಲ್ಲಿ ಭಯದ ಭಾವ ಹೋಗಲಾಡಿಸಿ ಹೊಸ ಉತ್ಸಾಹ ಬಿತ್ತುತ್ತವೆ.