ಪ್ರಧಾನಿ ನರೇಂದ್ರ ಮೋದಿ ಕೂತರೂ ಸುದ್ದಿ, ನಿಂತರೂ ಸುದ್ದಿ. ತಮ್ಮ ಪ್ರತಿನಡೆಯನ್ನೂ ಸುದ್ದಿಯಾಗುವ ಹಾಗೆ ಮಾಡೋದು ಹೇಗೆ ಅನ್ನೋ ಜಾಣ್ಮೆ ಅವರಿಗಿರುವುದರಿಂದಲೇ ದಿನೇ ದಿನೇ ಸೋಶಿಯಲ್ ಮಿಡಿಯಾದಲ್ಲಿ ತಮ್ಮದೇ ಟ್ರೆಂಡ್ ಸೃಷ್ಟಿಮಾಡುವ ತಾಕತ್ತೂ ಅವರಿಗೆ ಸಿದ್ಧಿಸಿದೆ. ನಿನ್ನೆ(ಡಿ.12)ಯೇ ನೋಡಿ, ಸಾಬರಮತಿ ನದಿಯಲ್ಲಿ ಸೀಪ್ಲೇನ್ ನಲ್ಲಿ ಪ್ರಯಾಣ ಮಾಡಿದ್ದೇ ಮಾಡಿದ್ದು. ಅಲ್ಲಿಯವರೆಗೂ ಸೀ ಪ್ಲೇನ್ ಎಂಬ ಕಾನ್ಸೆಪ್ಟೇ ಗೊತ್ತಿಲ್ಲದವರ ಬಾಯಲ್ಲೂ ಇಂದು ಸೀಪ್ಲೇನ್ ನರ್ತಿಸುತ್ತಿದೆ! ಗುಜರಾತ್ ವಿಧಾನಸಭಾ ಚುನಾವಣೆಗೆ ಡಿ. 14 ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯ ನಡೆಸುತ್ತಿರುವ ಮೋದಿ, ನಿನ್ನೆ ಸೀಪ್ಲೇನ್ ನಲ್ಲಿ ಪ್ರಯಾಣಿಸಿದ್ದರು. ಡಿ. 9 ರಂದು ಇಲ್ಲಿ ಮೊದಲ ಹಂತದ ಮತದಾನ ನಡೆದಿದ್ದು, ಡಿ. 18 ರಂದು ಮತ ಎಣಿಕೆ ನಡೆಯಲಿದೆ.ಭಾರತದ ಮೊದಲ ಸೀಪ್ಲೇನ್ ನ ಮೊಟ್ಟ ಮೊದಲ ಪ್ರಯಾಣಿಕ ನರೇಂದ್ರ ಮೋದಿ ಎಂಬ ವಿಷಯ ಸತ್ಯಾನಾ..?