'ಸಿಸಿಎಲ್' ಕ್ರಿಕೆಟ್ ಪಂದ್ಯಾವಳಿ ಮತ್ತೆ ಶುರು ಆಗುತ್ತಿದೆ. ಈ ಡಿಸೆಂಬರ್ 24 ಮತ್ತು 25ಕ್ಕೆ ಹೈದರಾಬಾದ್ ನಲ್ಲಿ ಮೈಕ್ರೊ ಪಂದ್ಯಾವಳಿ ನಡೆಯಲಿದ್ದು, ಜೂನ್ ತಿಂಗಳಿನಲ್ಲಿ ಲೀಗ್ ಪಂದ್ಯಗಳು ಪ್ರಾರಂಭವಾಗಲಿದೆಯಂತೆ. ವಿಶೇಷ ಅಂದರೆ ಈ ಬಾರಿಯ 'ಸಿಸಿಎಲ್' ಕ್ರಿಕೆಟ್ ಪಂದ್ಯ 10 ಓವರ್ ಗಳಿಗೆ ಸೀಮಿತವಾಗಿದೆ. ಈ ಹಿಂದೆ ಇದ್ದ ಟಿ20 ಮಾದರಿಯನ್ನು ಬಿಟ್ಟು ಪಂದ್ಯವನ್ನು ಟಿ10 ಆಗಿ ಬದಲಾಯಿಸಲಾಗಿದೆ. ಈ ವಿಷಯವನ್ನು ಸ್ವತಃ ನಟ ಹಾಗೂ 'ಕರ್ನಾಟಕ ಬುಲ್ಡೋಜರ್ಸ್' ತಂಡದ ನಾಯಕ ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮನರಂಜನೆ ದೃಷ್ಟಿಯಿಂದ ಪಂದ್ಯವನ್ನು 10 ಓವರ್ ಗಳಿಗೆ ಇಳಿಸಲಾಗಿದೆಯಂತೆ. ವೇಗದ ಆಟ ಈ ಬಾರಿ ಇದ್ದು ನೋಡುಗರಿಗೆ ಅಷ್ಟೇ ಮಜಾ ನೀಡಲಿದೆ. ಈ ಬಾರಿ ಏಳನೇ ಆವೃತ್ತಿಯ 'ಸಿಸಿಎಲ್' ಪಂದ್ಯ ನಡೆಯಲಿದ್ದು, ಕನ್ನಡ, ಹಿಂದಿ, ತಮಿಳುಮ ತೆಲುಗು ಸೇರಿದಂತೆ ಭಾರತ ಚಿತ್ರರಂಗದ ಅನೇಕ ದೊಡ್ಡ ಸೆಲೆಬ್ರಿಟಿಗಳು ಭಾಗಿಯಾಗಲಿದ್ದಾರೆ.
Celebrity cricket league has transformed for the good and the new rules and regulations are nothing but pure entertainment