ಖ್ಯಾತ ಹಾಸ್ಯ ನಟ ವಿಜಯ್ ಸಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ | Filmibeat Kannada

Filmibeat Kannada 2017-12-11

Views 1.4K

ತೆಲುಗು ಖ್ಯಾತ ಹಾಸ್ಯ ನಟ ವಿಜಯ್ ಸಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹೈದರಾಬಾದಿನ ಯೂಸಫ್ ಗೂಡಾದಲ್ಲಿರುವ ವಿಜಯ್ ಸಾಯಿ ನಿವಾಸದಲ್ಲಿ ಇಂದು ಮುಂಜಾನೆ ನೇಣು ಬಿಗಿದುಕೊಂಡು ನಟ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನಟ ವಿಜಯ್ ಸಾಯಿ ಅವರು ಸಾಲದಿಂದ ಬೇಸತ್ತಿದ್ದರು. ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.2001 ರಲ್ಲಿ ಚಿತ್ರರಂಗ ಪ್ರವೇಶ ಮಾಡಿದ್ದ ವಿಜಯ್ ಸಾಯಿ 'ಅಮ್ಮಾಯಿಲು ಅಬ್ಬಾಯಿಲು' 'ಬೊಮ್ಮರಿಲ್ಲು', 'ಮಂತ್ರ', 'ನುವ್ವೇ ಕಾವಲಿ' ಅಂತಹ ಚಿತ್ರಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿದ್ದರು. ಆದ್ರೆ, ಇತ್ತೀಚೆಗೆ ಯಾವುದೇ ಸಿನಿಮಾದಲ್ಲು ಅವಕಾಶ ಸಿಗದೆ ಸಿನಿಮಾಗಳಿಂದ ದೂರ ಉಳಿದಿದ್ದರು. ಆದ್ರೆ, ಕೌಟುಂಬಿಕ ಸಮಸ್ಯೆ ಮತ್ತು ಆರ್ಥಿಕ ಸಮಸ್ಯೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ವರದಿಯಾಗಿದೆ.

ಖ್ಯಾತ ಹಾಸ್ಯ ನಟ ವಿಜಯ್ ಸಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ

Share This Video


Download

  
Report form
RELATED VIDEOS