ಮೈಯಲ್ಲಿ ಚಳಿಯ ಗುಳ್ಳೆಗಳನ್ನೆಬ್ಬಿಸುವ ಡಿಸೆಂಬರ್ 31ರ ಹೊಸವರ್ಷದ ಸಂಭ್ರಮದಲ್ಲಿ, ಕೊರೆಯುವ ಮಾಗಿಯ ಚಳಿಯಲ್ಲಿ ಪಡ್ಡೆಗಳ ಮೈಯನ್ನು ಬೆಚ್ಚಗಾಗಿಸಲು ಕರನ್ಜಿತ್ ಕೌರ್ ವೋಹ್ರಾ ಎಂಬ ಅದ್ಭುತ ಅಂಗಸೌಷ್ಟವದ ಬೆಡಗಿ ಬೆಂಗಳೂರಿಗೆ ಬರುತ್ತಿದ್ದಾರೆ. ಈ ಕರನ್ಜಿತ್ ಕೌರ್ ವೋಹ್ರಾ ಯಾರೆಂಬುದನ್ನು ತಿಳಿಯಬೇಕಿದ್ದರೆ ಗೂಗಲ್ ನೊಮ್ಮೆ ಜಾಲಾಡಿ ನೋಡಿ. ಆ ಚೆಲುವೆ ಮತ್ತಾರೂ ಅಲ್ಲ, ಒಂದಾನೊಂದು ಕಾಲದಲ್ಲಿ ನೀಲಿ ಚಿತ್ರಗಳಲ್ಲಿ ನಟಿಸಿ ಕುಖ್ಯಾತಿಯನ್ನು ಗಳಿಸಿದ್ದ ಭಾರತದ ಮೂಲದ ಬೆಡಗಿ ಸನ್ನಿ ಲಿಯೋನ್. ಈ ಪರಿಯ ಸನ್ನಿ ಲಿಯೋನ್ ಅವರ 'ಸನ್ನಿ ನೈಟ್' ಎಂಬ ಹಾಟೆಸ್ಟ್ ಪಾರ್ಟಿಗೆ ಬೆಂಗಳೂರಿನಲ್ಲಿ ವೇದಿಕೆ ಸಜ್ಜಾಗುತ್ತಿದೆ. ನಾಗವಾರದಲ್ಲಿರುವ ಮಾನ್ಯತಾ ಎಂಬಾಸಿ ಬಿಸಿನೆಸ್ ಪಾರ್ಕ್ ನಲ್ಲಿ ಸನ್ನಿ ಲಿಯೋನ್ ಪಡ್ಡೆಗಳ ಚಳಿ ಬಿಡಿಸಲಿದ್ದಾರೆ. ಇಪ್ಪತ್ತೊಂದು ವಯಸ್ಸು ಮೀರಿದವರಿಗೆ ಮಾತ್ರ ಪ್ರವೇಶ! ಪ್ರೊಗ್ರೆಸಿವ್ ಬ್ರದರ್ಸ್ ಎಂದೇ ಹೆಸರುವಾಸಿಯಾಗಿರುವ ಸನ್ನಿ ಮತ್ತು ಕಣ್ ಎಂಬುವವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.
Local kannada organisations protest about Sunny leone visiting bengaluru to celebrate new year