ಸಿನಿಮಾ ನಟಿಯರಿಗೆ ಕೆಲವು ಬಾರಿ ಕೆಲವು ಅಭಿಮಾನಿಗಳು ಕಿರಿಕಿರಿ ಉಂಟು ಮಾಡುತ್ತಾರೆ. ಅಭಿಮಾನಿಗಳಿಂದ ಆಗುವ ಕೆಲವು ವರ್ತನೆಗಳು ನಟಿಯರಿಗೆ ಸಹಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಈಗ ಅದೇ ರೀತಿಯ ಘಟನೆ ನಡೆದಿದೆ. ನಟಿ ಅದಾ ಶರ್ಮಾ ದಕ್ಷಿಣ ಭಾರತದ ಜನಪ್ರಿಯ ನಟಿ. ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ 'ರಣವಿಕ್ರಮ' ಸಿನಿಮಾದಲ್ಲಿಯೂ ಅದಾ ಶರ್ಮಾ ನಟಿಸಿದ್ದರು. ಸಾಮಾನ್ಯವಾಗಿ ಅದಾ ಶರ್ಮ ಯಾವುದೇ ವಿವಾದಗಳನ್ನು ಮಾಡಿಕೊಳ್ಳುವುದಿಲ್ಲ. ಆದರೆ ಈಗ ಈ ನಟಿಗೆ ಅಭಿಮಾನಿಯೊಬ್ಬ ಕಿಸ್ ಕೊಡು ಎಂದು ಕೇಳಿದ್ದಾನೆ. ಅದಕ್ಕೆ ನಿರಾಕರಿಸಿದ ಆದಾ ಶರ್ಮ ಈಗ ಸುದ್ದಿಯಲ್ಲಿ ಇದ್ದಾರೆ.ಇತ್ತೀಚಿಗಷ್ಟೆ ಮುಂಬೈ ವಿಮಾನ ನಿಲ್ದಾಣದಲ್ಲಿ ನಟಿ ಅದಾ ಶರ್ಮಾರನ್ನು ಕಂಡ ಅಭಿಮಾನಿ 'ನೀವು ನನಗೆ ಕಿಸ್ ಕೊಡಿ' ಎಂದು ನೇರವಾಗಿ ಕೇಳಿದ್ದಾನೆ.ಅಭಿಮಾನಿಯ ಈ ವರ್ತನೆಯಿಂದ ಅದಾ ಶರ್ಮಾಗೆ ಕಿರಿಕಿರಿ ಉಂಟಾಗಿದೆ. ಕಿಸ್ ಕೊಂಡು ಎಂದ ಅಭಿಮಾನಿಯ ಬಯಕೆಯನ್ನು ಆಕೆ ಕೋಪದಿಂದ ನಿರಾಕರಿಸಿದ್ದಾರೆ.