ಕನ್ನಡ ಸಿನಿಮಾದ ಆದರ್ಶ ದಂಪತಿಗಳ ಸಾಲಿನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಪ್ರಮುಖರು. ಚಿತ್ರಗಳಲ್ಲಿ ಮಾತ್ರವಲ್ಲದೆ ಖಾಸಗಿ ಬದುಕಿನಲ್ಲಿಯೂ ಮತ್ತೊಬ್ಬರಿಗೆ ಆದರ್ಶವಾಗಿರುವ ಈ ತಾರಾದಂಪತಿಗಳಿಗೆ ಇಂದು (ಡಿಸೆಂಬರ್ 8) ವಾರ್ಷಿಕೋತ್ಸವದ ಸಂಭ್ರಮ. ಇಪ್ಪತ್ತಾರು ವರ್ಷಗಳಿಂದ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಾ ಬಂದಿರುವ ಸುಮಲತಾ ಹಾಗೂ ಅಂಬರೀಶ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿಗಳು ಶುಭಕೋರಿದ್ದಾರೆ. ವಿಶೇಷ ಅಂದರೆ ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಅಂಬರೀಶ್-ವಿಷ್ಣುವರ್ಧನ್ ರಂತೆ ಸ್ನೇಹಿತರಾಗಿದ್ದ ದರ್ಶನ್ ಹಾಗೂ ಸುದೀಪ್, ತಮ್ಮದೇ ಸ್ಟೈಲ್ ನಲ್ಲಿ ವಿಶ್ ಮಾಡಿದ್ದಾರೆ. ದರ್ಶನ್, ಸುದೀಪ್ ಜೊತೆಯಲ್ಲಿ ಇನ್ನೂ ಇಬ್ಬರು ವಿಶೇಷ ವ್ಯಕ್ತಿಗಳು ವಾರ್ಷಿಕೋತ್ಸವದ ಶುಭಾಶಯ ಹೇಳಿದ್ದಾರೆ. ಟ್ವಿಟ್ಟರ್ ಮೂಲಕ ನಟ ದರ್ಶನ್, ಅಂಬರೀಶ್ ಹಾಗೂ ಸುಮಲತಾ ಇಬ್ಬರಿಗೂ ಮದುವೆ ವಾರ್ಷಿಕೋತ್ಸವದ ಶುಭಾಶಯ ಕೋರಿದ್ದಾರೆ. ದರ್ಶನ್ ಅಭಿನಯದ ಮೆಜೆಸ್ಟಿಕ್ ಸಿನಿಮಾದ ಮುಹೂರ್ತ ಸಂದರ್ಭದಲ್ಲಿ ಅಂಬಿ ಹಾಗೂ ಸುಮಲತಾ ಜೊತೆ ತೆಗಿಸಿಕೊಂಡಿದ್ದ ಫೋಟೋ ವನ್ನ ಹಾಕಿ ಶುಭಾಶಯ ತಿಳಿಸಿದ್ದಾರೆ ಡಿ ಬಾಸ್ .
Kannada cinema star Ambarish and Sumalatha celebrate 26th wedding anniversary. Sudeep, Priya Sudeep and Darshan wishes for Ambarish-Sumalatha's wedding anniversary.