'ಬಿಗ್ ಬಾಸ್' ಮನೆಯೊಳಗೆ ಇಲ್ಲಿಯವರೆಗೂ ಜಗನ್ ಆಡಿರುವ ಜಗಳಗಳ ಲೆಕ್ಕವೇ ಇಲ್ಲ. ಕೇಳಿಸಿಕೊಳ್ಳುವ ವ್ಯವಧಾನ ಇಲ್ಲದೆ, ಸರಿ-ತಪ್ಪು ತೂಕ ಹಾಕದೆ, ಕಣ್ಣು ದೊಡ್ಡದು ಮಾಡಿ ಏರು ದನಿಯಲ್ಲೇ ಮಾತನಾಡುವ ಜಗನ್ ತಮ್ಮ ಕೆಟ್ಟ ಕೋಪದಿಂದಾಗಿ 'ಬಿಗ್ ಬಾಸ್' ಮನೆಯಲ್ಲಿ ಇರುವವರೆಲ್ಲರ ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆ. ಬರೀ ಸ್ಪರ್ಧಿಗಳ ತಾಳ್ಮೆ ಮಾತ್ರ ಅಲ್ಲ, 'ಬಿಗ್ ಬಾಸ್' ನೋಡುತ್ತಿರುವ ವೀಕ್ಷಕರ ತಾಳ್ಮೆಯನ್ನೂ ಜಗನ್ ಪರೀಕ್ಷೆ ಮಾಡುತ್ತಿದ್ದಾರೆ ಅಂದ್ರೆ ಖಂಡಿತ ತಪ್ಪಾಗಲ್ಲ.!ರಿಯಾಝ್, ದಿವಾಕರ್, ಸಮೀರಾಚಾರ್ಯ. ಇವರೆಲ್ಲರ ಜೊತೆಗೂ ವಾಕ್ಸಮರ ನಡೆಸಿರುವ ಜಗನ್ನಾಥ್ ವಿರುದ್ಧ ಚಂದನ್ ಶೆಟ್ಟಿ ಮೊಟ್ಟ ಮೊದಲ ಬಾರಿಗೆ ತಿರುಗಿ ಬಿದ್ದಿದ್ದಾರೆ.'ಗಂಧದ ಗುಡಿ' ಟಾಸ್ಕ್ ನಲ್ಲಿ ಒಂದೇ ಸಮ ಕಿರುಚಾಡುತ್ತಿದ್ದ ಜಗನ್ ವಿರುದ್ಧ ಚಂದನ್ ಶೆಟ್ಟಿ ಕೋಪಗೊಂಡು ಕೂಗಾಡಿದ್ದಾರೆ. ಹಾಗ್ನೋಡಿದ್ರೆ, ಚಂದನ್ ಶೆಟ್ಟಿ ತಾಳ್ಮೆ ಕಳೆದುಕೊಂಡು 'ಬಿಗ್ ಬಾಸ್' ಮನೆಯಲ್ಲಿ ಈ ರೇಂಜ್ ಗೆ ಕೂಗಾಡಿರುವುದು ಇದೇ ಮೊದಲ ಬಾರಿಗೆ.!ಯಾವುದೇ ಟಾಸ್ಕ್ ಆದರೂ, ಅದನ್ನ ಜಾಣತನದಿಂದ ಆಡುವ ಚಂದನ್ ಶೆಟ್ಟಿ ಅಷ್ಟು ಸುಲಭವಾಗಿ ತಾಳ್ಮೆ ಕಳೆದುಕೊಂಡವರಲ್ಲ. ತಮ್ಮ ಟಿ-ಶರ್ಟ್ ನ ದಿವಾಕರ್ ಹರಿದು ಹಾಕಿದಾಗಲೂ, ಚಂದನ್ ಶೆಟ್ಟಿ ತಾಳ್ಮೆಯಿಂದ ಇದ್ದರು. ಚಂದನ್ ಶೆಟ್ಟಿ ರವರ ತಾಳ್ಮೆಗೆ ಸುದೀಪ್ ಕೂಡ ಹ್ಯಾಟ್ಸ್ ಆಫ್ ಹೇಳಿದ್ದರು.
Bigg Boss Kannada 5: Week 8: big boss is one of the big reality show in colors kannada and there had a Verbal fight between Chandan Shetty and Jaganath