ಆಟದಲ್ಲಿ ಹೆಚ್ಚು ಆಕ್ರಮಣಕಾರಿ ಆಗಬೇಡಿ... ಕಣ್ಣು ದೊಡ್ಡದು ಮಾಡಿಕೊಳ್ಳುವುದನ್ನು ನಿಲ್ಲಿಸಿ... ಎಲ್ಲರ ಮೇಲೆ ಜೋರು ಮಾಡಬೇಡಿ ಅಂತ ಕಿಚ್ಚ ಸುದೀಪ್ ಬುದ್ಧಿ ಮಾತು ಹೇಳಿದರೂ ಜಗನ್ನಾಥ್ ಚಂದ್ರಶೇಖರ್ ಗೆ ಜ್ಞಾನೋದಯ ಆದ ಹಾಗೆ ಕಾಣುತ್ತಿಲ್ಲ.ಬಿಗ್ ಬಾಸ್' ನೀಡಿರುವ 'ಗಂಧದ ಗುಡಿ' ಟಾಸ್ಕ್ ನಲ್ಲಿ 'ಹುಲಿ' ಆಗಿರುವ ಜಗನ್ನಾಥ್ 'ದೊಡ್ಮನೆ'ಯಲ್ಲಿ ಅಕ್ಷರಶಃ ಹುಲಿಯಂತೆ ಘರ್ಜಿಸುತ್ತಿದ್ದಾರೆ, ಆರ್ಭಟ ಮಾಡುತ್ತಿದ್ದಾರೆ. ಟಾಸ್ಕ್ ನಡುವೆ ರಿಯಾಝ್ ಆಡಿದ ಒಂದು ಮಾತಿನಿಂದ ಜಗನ್ನಾಥ್ ಕೆರಳಿ, ದೊಡ್ಡ ರಾದ್ಧಾಂತಕ್ಕೆ ನಾಂದಿ ಹಾಡಿದರು. ಅಷ್ಟಕ್ಕೂ, ಆಗಿದ್ದೇನು.?ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ವಿಶಿಷ್ಟ ಬಾಂಧವ್ಯ ಹಾಗೂ ಸಂಬಂಧವನ್ನು ಪರಿಚಯಿಸುವ ಸಲುವಾಗಿ 'ಗಂಧದ ಗುಡಿ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನ 'ಬಿಗ್ ಬಾಸ್' ನೀಡಿದರು. ಇದರ ಅನುಸಾರ, ಸಮೀರಾಚಾರ್ಯ (ಕರಡಿ), ಜಗನ್ (ಹುಲಿ), ದಿವಾಕರ್ (ಕೋತಿ), ನಿವೇದಿತಾ (ಮರಿ ಆನೆ), ಆಶಿತಾ (ಗಿಣಿ) ಹಾಗೂ ಅನುಪಮಾ (ಕೋತಿ) ಕಾಡು ಪ್ರಾಣಿಗಳಾದರೆ... ಕಾರ್ತಿಕ್, ಚಂದನ್ ಶೆಟ್ಟಿ, ರಿಯಾಝ್, ವೈಷ್ಣವಿ, ಶ್ರುತಿ, ಕೃಷಿ ಹಾಗೂ ಜಯಶ್ರೀನಿವಾಸನ್ ಕಾಡು ಜನರಾದರು. ಇನ್ನೂ 'ಬಿಗ್ ಬಾಸ್' ಮನೆಯೊಳಗೆ ವಿಶೇಷ ಅತಿಥಿಯಾಗಿ ಬಂದ ಅಕುಲ್ ಬಾಲಾಜಿ ''ನಾಡಿನಿಂದ ಕಾಡಿಗೆ ಬಂದ'' ಮಾಸ್ಟರ್ ಪಾತ್ರವನ್ನ ವಹಿಸಿಕೊಂಡರು.
Bigg Boss Kannada 5: Week 8: big boss is one of the big reality show in colors kannada and there had a Verbal fight between Jagannath and Riyaz Basha.