Bigg Boss Kannada 5 Contestant Vaishnavi Chandran Menon, Kannada Actress who has entered Big House through Wild Card Entry, is younger than Niveditha Gowda.
ಇಲ್ಲಿಯವರೆಗೂ 'ಬಿಗ್ ಬಾಸ್ ಕನ್ನಡ' ಇತಿಹಾಸದಲ್ಲಿಯೇ ಅತಿ ಕಿರಿಯ ಸ್ಪರ್ಧಿ ಅಂದ್ರೆ 'ಡಬ್ ಸ್ಮ್ಯಾಶ್ ರಾಜಕುಮಾರಿ' ನಿವೇದಿತಾ ಗೌಡ ಎನ್ನಲಾಗಿತ್ತು. ಆದ್ರೀಗ, ನಿವೇದಿತಾ ಗೌಡಕ್ಕಿಂತಲೂ ಕಿರಿಯ ಸ್ಪರ್ಧಿ 'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟಿದ್ದಾರೆ.'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ 51ನೇ ದಿನ ಕನ್ನಡ ನಟಿ ವೈಷ್ಣವಿ 'ವೈಲ್ಡ್ ಕಾರ್ಡ್ ಎಂಟ್ರಿ' ಮೂಲಕ 'ದೊಡ್ಮನೆ'ಯೊಳಗೆ ಕಾಲಿಟ್ಟರು.
ಅಚ್ಚರಿ ಅಂದ್ರೆ, ಈ ವೈಷ್ಣವಿ.. ನಿವೇದಿತಾಗಿಂತ ಎರಡು ತಿಂಗಳು ಚಿಕ್ಕವಳು. ಹತ್ತೊಂಬತ್ತು ವರ್ಷದ ವೈಷ್ಣವಿ ಅದಾಗಲೇ ಐದು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.ಬೆಂಗಳೂರಿನ ಪ್ರತಿಷ್ಟಿತ ಮೌಂಟ್ ಕಾರ್ಮೆಲ್ ಕಾಲೇಜ್ ನಲ್ಲಿ ಪಿಯುಸಿ ವ್ಯಾಸಂಗ ಮಾಡಿರುವ ವೈಷ್ಣವಿ, ಸದ್ಯ ಮೊದಲನೇ ವರ್ಷದ ಬಿ.ಕಾಂ ಓದುತ್ತಿದ್ದಾರೆ. ಓದಿನ ಜೊತೆಗೆ ಅಭಿನಯವನ್ನೂ ಮಾಡುತ್ತಿರುವ ವೈಷ್ಣವಿ ಸದ್ಯ 'ಬಿಗ್ ಬಾಸ್' ಸ್ಪರ್ಧಿ.ಅರ್ಧ ಆಟ ಮುಗಿದ ಮೇಲೆ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಿರುವ ವೈಷ್ಣವಿ ಕಂಡರೆ ನಿವೇದಿತಾಗೆ ಅಭದ್ರತೆ ಕಾಡಲು ಆರಂಭಿಸಿದ್ಯಂತೆ. ಹಾಗಂತ ವೈಷ್ಣವಿ ಊಹಿಸಿದ್ದಾರೆ. ಅದು 'ಸೂಪರ್ ಟಾಕ್ ಟೈಮ್'ನ 'ದಿಢೀರ್ ಬೆಂಕಿ' ಸುತ್ತಿನಲ್ಲಿ.