ಟೀಂ ಇಂಡಿಯಾದ ಮಾಜಿ ನಾಯಕ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮಹೇಂದ್ರ ಸಿಂಗ್ ಧೋನಿ ಅವರು ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲು ಇದ್ದ ಆತಂಕ ನಿವಾರಣೆಯಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನೀಡಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನ ಹೊಸ ನಿಯಮಾವಳಿಗಳ ವಿವರ ಇಲ್ಲಿದೆ. ಐಪಿಎಲ್ ಆಡಳಿತ ಮಂಡಳಿ ಬುಧವಾರ ಸಭೆ ನಡೆಸಿ ತೆಗೆದುಕೊಂಡ ಪ್ರಮುಖ ನಿರ್ಣಯಗಳಲ್ಲಿ ಆಟಗಾರರ ಸಂಬಳ, ತಂಡದ ಬಳಿ ಇರಿಸಿಕೊಳ್ಳಬಹುದಾದ ಮೊತ್ತ, ಅಮಾನತುಗೊಂಡಿದ್ದ ತಂಡಗಳ ಮರು ಸೇರ್ಪಡೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು. 2018ರ ಐಪಿಎಲ್ ಯಲ್ಲಿ ಎರಡು ತಂಡಗಳು ಆಡಲಿದ್ದು, ಹಳೆ ತಂಡದಲ್ಲಿದ್ದ 5 ಆಟಗಾರರನ್ನು ಖರೀದಿ ಮಾಡಬಹುದು ಹಾಗೂ ಕೆಲ ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಹೀಗಾಗಿ, ಚೆನ್ನೈ ಸೂಪರ್ ಕಿಂಗ್ಸ್ ಪರ ಧೋನಿ ಮತ್ತೊಮ್ಮೆ ಬ್ಯಾಟ್ ಬೀಸಬಹುದಾಗಿದೆ.
The IPL Council met in New Delhi on Wednesday to discuss IPL Player retention policy, salary cap, player regulations and other related issues.