ಕನ್ನಡ ಸಿನಿಮಾ ನೋಡಿ ಹೊಟ್ಟೆ ಉರಿದುಕೊಂಡ ನಟ 'ವಿಜಯ್ ದೇವರಕೊಂಡ' | Filmibeat Kannada

Filmibeat Kannada 2017-12-05

Views 2.4K

ಕನ್ನಡ ಸಿನಿಮಾರಂಗ ಬದಲಾಗಿದೆ. ದಿನ ಕಳೆದಂತೆ ಸಿನಿಮಾಗಳ ಕ್ವಾಲಿಟಿ ಜೊತೆಗೆ ಕಂಟೆಂಟ್ ಕೂಡ ಬದಲಾಗುತ್ತಿದೆ. ಹೊಸ ರೀತಿಯ ಸಿನಿಮಾಗಳು ಕನ್ನಡ ಪ್ರೇಕ್ಷಕರನ್ನ ಸೆಳೆಯುತ್ತಿವೆ. ನಮ್ಮ ರಾಜ್ಯಕ್ಕಷ್ಟೇ ಸೀಮಿತವಾಗಿದ್ದ ಕನ್ನಡ ಚಿತ್ರಗಳು ಸಾಗರದಾಚೆಗೂ ಪ್ರದರ್ಶನವಾಗಿ ಅಕ್ಕ-ಪಕ್ಕದ ಇಂಡಷ್ಟ್ರೀಯ ಕಲಾವಿರು ನಮ್ಮ ಸಿನಿಮಾಗಳಿಂದ ಸ್ಫೂರ್ತಿ ಪಡೆಯುವಂತ ಚಿತ್ರಗಳು ಕನ್ನಡ ಚಿತ್ರಗಳು ತೆರೆಗೆ ಬರ್ತಿದೆ. ಟಾಲಿವುಡ್ ನಲ್ಲಿ ಅರ್ಜುನ್ ರೆಡ್ಡಿ ಅಂತಾನೇ ಫೇಮಸ್ ಆಗಿರೋ ನಟ ವಿಜಯ್ ದೇವರಕೊಂಡ ಅವರಿಗೆ ಕನ್ನಡ ಸಿನಿಮಾಗಳನ್ನ ನೋಡಿದ್ರೆ ಹೊಟ್ಟೆಕಿಚ್ಚಾಗುತ್ತಂತೆ. ಹಿಟ್ ಸಿನಿಮಾ ನೀಡಿದ್ರೂ ಕೂಡ ನಮ್ಮ ಇಂಡಷ್ಟ್ರೀಯಲ್ಲಿ ಬರೋ ಚಿತ್ರಗಳಂತಹ ಕತೆಯಲ್ಲಿ ಅಭಿನಯಿಸಬೇಕು ಅನ್ನೋ ಬಯಕೆ ಇದ್ಯಾಂತೆ. ಇತ್ತಿಚಿಗಷ್ಟೇ ರಿಲೀಸ್ ಆದ ಚಮಕ್ ಚಿತ್ರದ ಆಡಿಯೋ ಸಮಾರಂಭದಲ್ಲಿ ನಟ ವಿಜಯ್ ದೇವರಕೊಂಡ ಸ್ಯಾಂಡಲ್ ವುಡ್ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ನಟ ವಿಜಯ್ ದೇವರಕೊಂಡ ಮಫ್ತಿ ಸಿನಿಮಾದ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. "ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ಅಭಿನಯಿಸಿದ್ರು ಮಫ್ತಿ ಚಿತ್ರದ ಟೀಸರ್ ನೋಡಿ ಹೊಟ್ಟೆಕಿಚ್ಚು ಆಗುತ್ತಿದೆ. ಮಫ್ತಿ ಅಂತಹ ಸಿನಿಮಾದಲ್ಲಿ ನಾನು ಅಭಿನಯಿಸಬೇಕು ಅನ್ನೋ ಆಸೆ ಇದೆ" ಎಂದಿದ್ದಾರೆ.
arjun reddy movie fame tollywood actor vijay devarakonda jealous about kannada movies and also he liked shivaraj kumar,s mafti teaser .he is the one of the good and best actor in kannada industry

Share This Video


Download

  
Report form
RELATED VIDEOS