'ಜೀ ಕನ್ನಡ' ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕೂಡ ಒಂದು. ಈ ಕಾರ್ಯಕ್ರಮದ ಗ್ರಾಂಡ್ ಫಿನಾಲೆ ಸಂಚಿಕೆ ನಿನ್ನೆ ಪ್ರಸಾರ ಆಗಿದೆ. 'ನಾಗಿಣಿ' ಧಾರಾವಾಹಿಯ ಜೋಡಿ ಅರ್ಜುನ್ ಮತ್ತು ಅಮೃತ ಕಾರ್ಯಕ್ರಮದ ವಿಜೇತರಾಗಿದ್ದಾರೆ. 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮದ ಒಟ್ಟು 11 ಜೋಡಿಗಳು ಪೈಕಿ 4 ಜೋಡಿಗಳು ಫೈನಲ್ ಗೆ ಬಂದಿತ್ತು. ಈ ಜೋಡಿಗಳ ಪೈಕಿ ಗ್ರಾಂಡ್ ಫಿನಾಲೆಯಲ್ಲಿ ಗೆಲುವು ಸಾಧಿಸುವುದಕ್ಕೆ ದೊಡ್ಡ ಪೈಪೋಟಿ ಏರ್ಪಟಿತ್ತು. ಆದರೆ ಕೊನೆಗೆ 'ನಾಗಿಣಿ' ಸೀರಿಯಲ್ ನಲ್ಲಿನ ಅರ್ಜುನ್ ಮತ್ತು ಅಮೃತ ಪಾತ್ರಧಾರಿಗಳಾದ ದೀಕ್ಷಿತ್ ಶೆಟ್ಟಿ ಮತ್ತು ದೀಪಿಕಾ ದಾಸ್ ಗೆದ್ದಿದ್ದಾರೆ. 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಗ್ರಾಂಡ್ ಫಿನಾಲೆ ಕಾರ್ಯಕ್ರಮ ತುಮಕೂರಿನಲ್ಲಿ ನಡೆದಿತ್ತು. ಈ ಕಾರ್ಯಕ್ರಮ ನಿನ್ನೆ ಪ್ರಸಾರ ಆಗಿದ್ದು, ದೀಕ್ಷಿತ್ ಶೆಟ್ಟಿ ಮತ್ತು ದೀಪಿಕಾ ದಾಸ್ ಕಾರ್ಯಕ್ರಮದ ವಿಜೇತರಾಗಿದ್ದಾರೆ. ಇನ್ನು ಎರಡನೇ ಸ್ಥಾನಕ್ಕೆ ವಿವೇಕ್ ಮತ್ತು ನೇಹಾ ಪಾಟೀಲ್ ಜೋಡಿ ತೃಪ್ತಿ ಪಟ್ಟುಕೊಂಡರು.4 ತಂಡಗಳು 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮದ ಫೈನಲ್ ವರೆಗೆ ಬಂದಿದ್ದರು. ಸ್ಪರ್ಧಿಗಳಾದ ದೀಕ್ಷಿತ್ ಶೆಟ್ಟಿ - ದೀಪಿಕಾ ದಾಸ್, ಚೆನ್ನಪ್ಪಾ - ಇಂಪನಾ, ವಿವೇಕ್ - ನೇಹಾ ಪಾಟೀಲ್ ಮತ್ತು ವೇಣುಗೋಪಾಲ್ ಮತ್ತು ಸಾನ್ವಿ ಅಂತಿಮ ಹಂತ ತಲುಪಿದ್ದರು.
Dance karnatak dance family war is one of the best entertainment reality show in zee kannada.there Nagini serial Actor Deekshith Shetty and Actress Deepika Das won Zee Kannada's popular show Dance Karnataka Dance.