ರಾಹುಲ್‌ಗೆ ಪ್ರಣಬ್ ತಿಲಕ, ಸಿದ್ದರಾಮಯ್ಯ ಅಪ್ಪುಗೆಯ ಪುಳಕ! ಕಾಂಗ್ರೆಸ್ ಪಾಲಿನ 'ಡಾರ್ಲಿಂಗ್' ರಾಹುಲ್ ಗಾಂಧಿ ಎಂದು ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರು ಸೋಮವಾರ ಬಣ್ಣಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆ ಆಗುವ ವಿಚಾರಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಬೆನ್ನಿಗೆ ಮನಮೋಹನ್ ಸಿಂಗ್, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಪ್ರಮುಖ ನಾಯಕರು ನಿಂತಿದ್ದಾರೆ.ಇದು ಅದ್ಭುತವಾದ ದಿನ. ಕಾಂಗ್ರೆಸ್ ನ ಪುರುಷರು- ಮಹಿಳೆಯರ ಪಾಲಿನ ಅಚ್ಚುಮೆಚ್ಚಾದ ರಾಹುಲ್ ಗಾಂಧಿ ಅವರ ದೇಶ ಹಾಗೂ ಕಾಂಗ್ರೆಸ್ ಬಗೆಗಿನ ಪ್ರೀತಿ ಕಡೆಗೆ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ ಎಂದು ಮನಮೋಹನ್ ಸಿಂಗ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಅವರ ಹೆಸರನ್ನು ಸೂಚಿಸಬೇಕಾದ ನಾಲ್ವರ ಪೈಕಿ ಮನಮೋಹನ್ ಸಿಂಗ್ ಕೂಡ ಒಬ್ಬರು. ಮುಖ್ಯ ಸೂಚಕರಾಗಿ ಹಾಲಿ ಅಧ್ಯಕ್ಷೆಯಾದ ಸೋನಿಯಾ ಗಾಂಧಿ ಇರುತ್ತಾರೆ.