ಫೈರಿಂಗ್ ಸ್ಟಾರ್... ಯೂಟ್ಯೂಬ್ ಸ್ಟಾರ್... ಟಿ.ಆರ್.ಪಿ ಕಿಂಗ್ ಅಂತಲೇ ಫೇಮಸ್ ಆಗಿದ್ದ ಹುಚ್ಚ ವೆಂಕಟ್ 'ಬಿಗ್ ಬಾಸ್' ಮನೆಯೊಳಗೆ ಹೋಗಿ ಭರಪೂರ ಮನರಂಜನೆ ನೀಡುತ್ತಿರುವಾಗಲೇ, ಸಹ ಸ್ಪರ್ಧಿ ಮೇಲೆ ಹಲ್ಲೆ ಮಾಡಿ ಕಾರ್ಯಕ್ರಮದಿಂದ ಕಿಕ್ ಔಟ್ ಆಗಿದ್ದರು. ನಂತರ ಅತಿಥಿಯಾಗಿ 'ಬಿಗ್ ಬಾಸ್' ಮನೆಯೊಳಗೆ ಹೋಗಿದ್ದಾಗಲೂ, ಪ್ರಥಮ್ ಗೆ ಥಳಿಸಿ ಬಂದಿದ್ದ ಹುಚ್ಚ ವೆಂಕಟ್ ಇದೀಗ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಹಾಗಂತ ಈ ಬಾರಿ ಹುಚ್ಚ ವೆಂಕಟ್ ಯಾರ ಮೇಲೂ ಹಲ್ಲೆ ಮಾಡಿಲ್ಲ. ಬದಲಾಗಿ ಹುಚ್ಚ ವೆಂಕಟ್ ಮೇಲೆ ಯುವಕನೊಬ್ಬ ಹಲ್ಲೆ ಮಾಡಿದ್ದಾನೆ. ಹುಚ್ಚ ವೆಂಕಟ್ ತಲೆಗೆ ಹೆಲ್ಮೆಟ್ ನಿಂದ ಯುವಕನೋರ್ವ ಥಳಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ನಟ, ನಿರ್ಮಾಪಕ, ನಿರ್ದೇಶಕ ಹುಚ್ಚ ವೆಂಕಟ್ ಮೇಲೆ ಹಲ್ಲೆ ನಡೆದಿದೆ. ನಡುಬೀದಿಯಲ್ಲಿ ಹುಚ್ಚ ವೆಂಕಟ್ ತಲೆಗೆ ಹೆಲ್ಮೆಟ್ ನಿಂದ ಯುವಕನೊಬ್ಬ ಥಳಿಸಿದ್ದಾನೆ.
CCTV footage shows Huccha Venkat being thrashed by a stranger