ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಮಹೇಂದ್ರ ಧೋನಿ ಅವರು ಆಟಗಾರರಿಗೆ ವೇತನ ಹೆಚ್ಚಳದ ಬೇಡಿಕೆಗೆ ಆಡಳಿತ ಸಮಿತಿ ಒಪ್ಪಿಗೆ ಸೂಚಿಸಿದೆ. ಭಾರತ ಕ್ರಿಕೆಟ್ ಆಟಗಾರರಿಗೆ ವೇತನ ಹೆಚ್ಚಳ ನೀಡುವಂತೆ ವಿರಾಟ್ ಕೊಹ್ಲಿ ಬಿಸಿಸಿಐ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಬಿಸಿಸಿಐಗೆ ಸುಪ್ರೀಂ ಕೋರ್ಟ್ ರಚಿಸಿದ್ದ ಆಡಳಿತ ಸಮಿತಿ ಒಪ್ಪಿಗೆ ಸೂಚಿಸಿದೆ. ಧೋನಿ ಮತ್ತು ಕೊಹ್ಲಿ ಇಂದು (ಗುರುವಾರ) ಸಿಒಎ ಮುಖ್ಯಸ್ಥ ವಿನೋದ್ ರೈ, ಡಯಾನಾ ಎಡುಜಿ ಮತ್ತು ಬಿಸಿಸಿಐ ಸಿಇಒ ರಾಹುಲ್ ಜೋಶ್ರಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮಾತುಕತೆ ನಡೆಸಿದರು. ಬಳಿಕ ಆಡಳಿತ ಸಮಿತಿಯು ಭಾರತ ಕ್ರಿಕೆಟ್ ಆಟಗಾರರ ವೇತನ ಹೆಚ್ಚಳಕ್ಕೆ ಒಪ್ಪಿಕೊಂಡಿದೆ. ಮುಂದಿನ ವರ್ಷ ಜುಲೈ ಮತ್ತು ಸೆಪ್ಟೆಂಬರ್ ನಡುವೆ ಇಂಗ್ಲೆಂಡಿನಲ್ಲಿ ಭಾರತ ಪೂರ್ಣ ಸರಣಿಯನ್ನು ಆಡಲಿದೆ.
Indian national team skipper Virat Kohli demanded a greater share of India's growing cricket wealth for players ahead of contract talks this week, officials have agreed.