ಸಿಕ್ಕಾಪಟ್ಟೆ ಬದಲಾದ ಕೃಷಿ ತಾಪಂಡ.! ಇದು ಅನುಪಮಾ ಅಭಿಪ್ರಾಯ.! | Filmibeat Kannada

Filmibeat Kannada 2017-11-27

Views 618

ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಐದನೇ ವಾರ ಔಟ್ ಆಗಿದ್ದ ನಟಿ ಕೃಷಿ ತಾಪಂಡ, ಆರನೇ ವಾರ ಮರಳಿ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟರು. ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿರುವ ನಟಿ ಕೃಷಿ ತಾಪಂಡ, 'ಬಿಗ್ ಬಾಸ್' ಮನೆಯೊಳಗೆ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಿದ ಮೇಲೆ ಸಿಕ್ಕಾಪಟ್ಟೆ ಬದಲಾಗಿದ್ದಾರಂತೆ.ಎಲಿಮಿನೇಟ್ ಆಗುವ ಮುನ್ನ ಕೃಷಿ ತಾಪಂಡ ಹೇಗಿದ್ದರೋ, ಈಗ ಹಾಗಿಲ್ಲವಂತೆ. ಇದು ನಟಿ ಅನುಪಮಾ ಗೌಡ ಅಭಿಪ್ರಾಯ.ಮುಂಚೆ 'ಬಿಗ್ ಬಾಸ್' ಮನೆಯಲ್ಲಿ ಅನುಪಮಾ ಗೌಡ ಹಾಗೂ ಕೃಷಿ ತಾಪಂಡ ಬೆಸ್ಟ್ ಫ್ರೆಂಡ್ಸ್ ಆಗಿದ್ದರು. ಅನುಪಮಾ ಜೊತೆ ಕೃಷಿ ಹೆಚ್ಚು ಕಾಲ ಕಳೆಯುತ್ತಿದ್ದರು. ಆದ್ರೀಗ, ಒಂದು ರೌಂಡ್ ಹೊರಗೆ ಹೋಗಿ ಬಂದ್ಮೇಲೆ, ಕೃಷಿ ತಾಪಂಡ ಅವರಲ್ಲಿ ತುಂಬಾ ಬದಲಾವಣೆ ಆಗಿದ್ಯಂತೆ. ಮುಂದೆ ಓದಿರಿ..'ಬಿಗ್ ಬಾಸ್' ಮನೆಯೊಳಗೆ ಕೃಷಿ ರೀಎಂಟ್ರಿ ಕೊಟ್ಟ ಮೇಲೆ, ''ಅವಳು ಮಾತನಾಡುತ್ತಿರುವ ರೀತಿ ತುಂಬಾ ಬದಲಾಗಿದೆ'' ಎಂಬ ಅಭಿಪ್ರಾಯ ಅನುಪಮಾ ಗೌಡ ರವರಿಂದ ವ್ಯಕ್ತವಾಯ್ತು.

Bigg Boss Kannada 5: Week 6: There is a drastic change in Krishi Thapanda says Anupama.watch this video

Share This Video


Download

  
Report form
RELATED VIDEOS