'ಬಿಗ್ ಬಾಸ್' ಮನೆಯಲ್ಲಿ ಉತ್ಸಾಹವೇ ಇಲ್ಲದ ಸ್ಪರ್ಧಿ 'ಆಶಿತಾ' | Oneindia Kannada

Filmibeat Kannada 2017-11-27

Views 604

''ಬಿಗ್ ಬಾಸ್' ಮನೆಯಲ್ಲಿ ಉತ್ಸಾಹವೇ ಇಲ್ಲದ ಸ್ಪರ್ಧಿ ಅಂದ್ರೆ ಅದು ಆಶಿತಾ.!'' ಹಾಗಂತ ನಾವು ಹೇಳುತ್ತಿಲ್ಲ. ಬದಲಾಗಿ 'ಬಿಗ್ ಬಾಸ್' ನಿರೂಪಕ ಕಿಚ್ಚ ಸುದೀಪ್ ಹೇಳಿದ್ದಾರೆ. ಅದನ್ನ ಆಶಿತಾ ಕೂಡ ಒಪ್ಪಿಕೊಂಡಿದ್ದಾರೆ.'ಬಿಗ್ ಬಾಸ್' ಮನೆಗೆ ಕಾಲಿಟ್ಟ ದಿನದಿಂದಲೂ, ಅಡುಗೆ ಮನೆಯಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿರುವ ಆಶಿತಾ, ಟಾಸ್ಕ್ ಗಳಲ್ಲಿ ಅಷ್ಟೇನು ಉತ್ಸಾಹದಿಂದ ಪಾಲ್ಗೊಳ್ಳುತ್ತಿಲ್ಲ.ಇದನ್ನೆಲ್ಲ ಗಮನಿಸಿರುವ ಸುದೀಪ್, 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಆಶಿತಾಗೆ ಕ್ಲಾಸ್ ತೆಗೆದುಕೊಂಡರು. ಮುಂದೆ ಓದಿರಿ...''ಉತ್ಸಾಹ ಇಲ್ಲದೇ ಇರುವುದು ಅಂದ್ರೆ ಏನು.?'' ಎಂದು ಆಶಿತಾಗೆ ಸುದೀಪ್ ಪ್ರಶ್ನಿಸಿದರು. ಅದಕ್ಕೆ, ''ನಾನು'' ಎಂದು ಆಶಿತಾ ಕೂಡ ಒಪ್ಪಿಕೊಂಡರು.''ಇಷ್ಟು ಬೇಜಾರಿನಿಂದ ಉಳಿಯುವುದಕ್ಕೆ 'ಬಿಗ್ ಬಾಸ್' ಮನೆಗೆ ಯಾಕೆ ಹೋದ್ರಿ.?'' ಎಂದು ಸುದೀಪ್ ಕೇಳಿದ್ದಕ್ಕೆ, ''ನಾನು ಬೇಜಾರಿನಿಂದ ಇಲ್ಲ. ಈ ವಾರ ನನಗೆ ಹುಷಾರಿರಲಿಲ್ಲ'' ಎಂದು ಆಶಿತಾ ಕಾರಣ ಕೊಟ್ಟರು.''ಒಂದು ವಾರ ನೋಡಿ ಈ ಅಭಿಪ್ರಾಯಕ್ಕೆ ಬಂದಿಲ್ಲ. 43 ದಿನಗಳನ್ನು ಲೆಕ್ಕ ಹಾಕಿ ಈ ಅಭಿಪ್ರಾಯವನ್ನ ನಿಮ್ಮ ತನಕ ತಲುಪಿಸಿದ್ದೇವೆ. 'ಬಿಗ್ ಬಾಸ್' ಮನೆಯಲ್ಲಿ ವ್ಯಕ್ತಿತ್ವ, ಪ್ರತಿಭೆ, ಕಲೆ ಪ್ರದರ್ಶನ ಮಾಡಬೇಕು ಎಂದು ಕೋಟ್ಯಾಂತರ ಜನ ಆಸೆ ಪಡುತ್ತಾರೆ. ಆದರೆ ಈ ಮನೆಯಲ್ಲಿ ಎಲ್ಲರನ್ನೂ ಹಾಕಲು ಆಗಲ್ಲ. ಆದ್ರೆ, ಉತ್ಸಾಹಿ ಸ್ಪರ್ಧೆಯ ಜಾಗವನ್ನ ತಾವು ಕಿತ್ಕೊಂಡು ಅದನ್ನ ವೇಸ್ಟ್ ಮಾಡುವ ಮೂಲಕ ಯಾವ ಸಾಧನೆ ಕೂಡ ಆಗಲ್ಲ. ಇದು ಒಳ್ಳೆಯದಲ್ಲ'' ಎಂದು ಸುದೀಪ್ ಹೇಳಿದರು.


Bigg Boss Kannada 5: big boss is a one of the big reality show in colors super, Bigg Boss Kannada 5: Week 6: Sudeep advices Ashita like this .watch this video

Share This Video


Download

  
Report form
RELATED VIDEOS