Tollywood mega family supreme star Sai Dharam Tej said on his Facebook live Puneeth Rajkumar and Yash my favorite actors.
'ಪವರ್ ಸ್ಟಾರ್-ರಾಕಿಂಗ್ ಸ್ಟಾರ್'ರನ್ನ ಮೆಚ್ಚಿದ ಟಾಲಿವುಡ್ 'ಸುಪ್ರೀಂ ಹೀರೋ' ಕನ್ನಡ ಸಿನಿಮಾರಂಗದಲ್ಲಿ ಬರುತ್ತಿರುವ ಸಿನಿಮಾಗಳು ಪರಭಾಷೆಯ ಕಲಾವಿದರನ್ನ ಆಕರ್ಷಣೆ ಮಾಡ್ತಿವೆ. ಇಲ್ಲಿಯ ಕಲಾವಿದರ ಅಭಿನಯಕ್ಕೆ ಕೇವಲ ಪ್ರೇಕ್ಷಕರಷ್ಟೇ ಅಲ್ಲದೆ ಪರಭಾಷೆಯ ನಟರು ಮನಸೋಲುತ್ತಿದ್ದಾರೆ. ಈ ಮಾತನ್ನ ನಾವ್ ಹೇಳ್ತಿಲ್ಲ, ಸ್ವತಃ ಅನ್ಯ ಭಾಷೆಯ ಕಲಾವಿದರೇ ಹೇಳಿಕೊಂಡಿದ್ದಾರೆ. ಪ್ರಯೋಗಾತ್ಮಕ ಸಿನಿಮಾಗಳಂತೆ ಕಮರ್ಷಿಯಲ್ ಚಿತ್ರಗಳು ಕೂಡ ಜನರನ್ನ ಆಕರ್ಷಣೆ ಮಾಡುತ್ತಿದ್ದು, ಸದ್ಯ ಪಕ್ಕದ ಇಂಡಷ್ಟ್ರಿಯವರ ಕಣ್ಣು ನಮ್ಮ 'ಪವರ್ ಸ್ಟಾರ್' ಹಾಗೂ 'ರಾಕಿಂಗ್ ಸ್ಟಾರ್' ಮೇಲೆ ಇದೆ. ಹೌದಾ.! ಅಂತ ಆಶ್ಚರ್ಯ ಪಡಬೇಕಾಗಿಲ್ಲ ಖುದ್ದು ಟಾಲಿವುಡ್ ನಟರೇ ಈ ಮಾತನ್ನ ಹೇಳಿದ್ದಾರೆ. ರಾಕಿಂಗ್ ಸ್ಟಾರ್ ಹಾಗೂ ಪವರ್ ಸ್ಟಾರ್ ಬಗ್ಗೆ ಇಂತಹ ಮಾತನ್ನಾಡಿದ ಆ ನಟ ಯಾರು ? ಪರಭಾಷಾ ಸ್ಟಾರ್ ಗಳಿಗೆ ಕನ್ನಡದ ಸ್ಟಾರ್ ಕಲಾವಿದರ ಮೇಲೆ ಯಾವಾಗಲೂ ಕಣ್ಣು ಇದ್ದೇ ಇರುತ್ತೆ. ಸಾಮಾನ್ಯವಾಗಿ ಟಾಲಿವುಡ್ ಸ್ಟಾರ್ ಗಳು ಬೆಂಗಳೂರಿಗೆ ಬಂದಾಗ ನಿಮಗೆ ಕನ್ನಡ ಸ್ಟಾರ್ ಗಳ ಬಗ್ಗೆ ಹಾಗೂ ಕನ್ನಡ ಸಿನಿಮಾಗಳ ಬಗ್ಗೆ ಸಾಮಾನ್ಯವಾಗಿ ಮಾತನಾಡಿರ್ತಾರೆ. ಆದ್ರೀಗ, ಮೆಗಾ ಫ್ಯಾಮಿಲಿಯಿಂದ 'ಪವರ್ ಸ್ಟಾರ್' ಮತ್ತು 'ರಾಕಿಂಗ್ ಸ್ಟಾರ್' ಗೆ ಮೆಚ್ಚುಗೆ ವ್ಯಕ್ತವಾಗಿದೆ.