ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಸರಳತೆಗೆ ಮಾರುಹೋದ ನೆಟ್ಟಿಗರು | Oneindia Kannada

Oneindia Kannada 2017-11-24

Views 1.5K

ಬೆಂಗಳೂರು, ನವೆಂಬರ್ 24: ಕ್ರಿಕೆಟ್ ದಿಗ್ಗಜ, ಯುವ ಕ್ರಿಕೆಟ್ ತಂಡದ ಹಾಲಿ ಕೋಚ್ ರಾಹುಲ್ ದ್ರಾವಿಡ್ ಅವರ ಸರಳತೆಗೆ ಸಾಮಾಜಿಕ ಜಾಲ ತಾಣ ಟ್ವೀಟ್ ಲೋಕದ ಮಂದಿ ಮಾರು ಹೋಗಿದ್ದಾರೆ. ಮೈದಾನದ ಒಳಗೂ-ಹೊರಗೂ ಸಹ ಆಟಗಾರರು, ಎದುರಾಳಿ ತಂಡದ ಆಟಗಾರ ಜತೆಗೂ ಉತ್ತಮ ಬಾಂಧವ್ಯ ಹೊಂದಿರುವ ಕ್ರಿಕೆಟ್ ಲೋಕದ ಅಜಾತ ಶತ್ರು ರಾಹುಲ್ ದ್ರಾವಿಡ್ ಅವರು ತಮ್ಮ ಮಕ್ಕಳ ಜತೆ ವಿಜ್ಞಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಚಿತ್ರವೊಂದು ಭಾರಿ ಚರ್ಚೆಯಲ್ಲಿದೆ.ವಿಜ್ಞಾನ ಮೇಳವೊಂದಕ್ಕೆ ತಮ್ಮ ಮಕ್ಕಳೊಂದಿಗೆ ಬಂದಿದ್ದ ರಾಹುಲ್​ ದ್ರಾವಿಡ್ ಜನ ಸಾಮಾನ್ಯರಂತೆ ಸರದಿಯ ಸಾಲಿನಲ್ಲಿ ನಿಂತು ಮೇಳ ವೀಕ್ಷಿಸಿದ್ದಾರೆ.ವಿಡ್ ಸರಳತೆಯನ್ನು ಹಾಡಿ ಹೊಗಳಿ, ಫೋಟೋ ಸಮೇತ ಟ್ವೀಟ್ ಮಾಡಲಾಗಿದೆ. ಗೌರವ ಹಾಗೂ ಅಭಿಮಾನದಿಂದ ದ್ರಾವಿಡ್ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.

Twitter is abuzz with a viral Photo of Cricket legend Rahul Dravid in a queue with his kids at a science exhibition.watch this video

Share This Video


Download

  
Report form
RELATED VIDEOS