People are still trolling Prakash Raj for his statement against trolls in social media. He has addressed media in a press conference in Bengaluru Press club, and announced his decision to start a campaign called 'Just Asking' to control Trolls on social media. And also blames Mysuru Kodagu MP Pratap Simha for speaking about Prakash Rai's personal life.
ಪ್ರಕಾಶ್ ರೈ ವಿರುದ್ಧ ಇನ್ನೂ ನಿಂತಿಲ್ಲ ಟ್ರೋಲ್ ಸಮರ. ಹೇಳಿ ಕೇಳಿ ಇದು ಟ್ರೋಲ್ ಕಾಲ. ಈ ಟ್ರೋಲ್ ಹೈಕ್ಳನ್ನ ಎದುರು ಹಾಕ್ಕೊಂಡ್ರೆ ಕೇಳ್ಬೇಕಾ? ತಮ್ಮ ವೈಯಕ್ತಿಕ ವಿಷಯಗಳನ್ನೆಲ್ಲ ಟ್ರೋಲ್ ಮಾಡಿದ್ದಾರೆಂದು ಆರೋಪಿಸಿ ನಟ ಪ್ರಕಾಶ್ ರೈ ಅವರು ನ.23 ರಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಟ್ರೋಲ್ ಗೂಂಡಾಗಿರಿಯನ್ನು ಹತ್ತಿಕ್ಕೋ ಯತ್ನಕ್ಕೇನೋ ಕೈಹಾಕಿದ್ದರು.ಆದರೆ ಟ್ರೋಲ್ ಕಡಿವಾಣಕ್ಕೆ ಹೊರಟ ಅವರ ನಡೆಯೇ ಮತ್ತಷ್ಟು ಟ್ರೋಲ್ ಗೆ ಅವಕಾಶ ಮಾಡಿಕೊಟ್ಟ ಹಾಗಾಗಿದೆ. ನಿನ್ನೆ ಪತ್ರಿಕಾಗೋಷ್ಠಿ ಆರಂಭವಾಗುತ್ತಿದ್ದಂತೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ಆರಂಭವಾದ ಟ್ರೋಲ್ ಗಗಳು ಇಂದೂ ಮುಂದುವರಿದಿದೆ. ಅದೇನು ನಿಲ್ಲುವ ಹಾಗೂ ಕಾಣುತ್ತಿಲ್ಲ!ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಪ್ರಕಾಶ್ ರೈ ಅವರ ವೈಯಕ್ತಿಕ ಬದುಕಿಗೆ ಸಂಬಂಧಪಟ್ಟ ಹಾಗೆ ವೆಬ್ ಸೈಟ್ ವೊಂದರಲ್ಲಿ ಬಂದಿದ್ದ ವ್ಯಂಗ್ಯ ಸುದ್ದಿಯನ್ನು ರೀಟ್ವೀಟ್ ಮಾಡಿದ್ದರು. ಆದ್ದರಿಂದ ಪ್ರತಾಪ್ ಸಿಂಹ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಟ್ರೋಲ್ ಮಾಡಿದ್ದಕ್ಕಾಗಿ ಅವರ ವಿರುದ್ಧ ಮೊಕದ್ದಮೆ ಹೂಡುವುದಾಗಿ ಪ್ರಕಾಶ್ ರೈ ನಿನ್ನೆ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಲ್ಲದೆ, ಈಗಾಗಲೇ ಅವರಿಗೆ ನೋಟಿಸ್ ಸಹ ಕಳಿಸಿದ್ದಾಗಿ ತಿಳಿಸಿದ್ದರು.