ನಟಿ ನಮಿತಾ ಮನೆಯಲ್ಲಿ 'ಮದುವೆ'ಯ ಸಂಭ್ರಮ ಸಡಗರ | Filmibeat Kannada

Filmibeat Kannada 2017-11-23

Views 3.6K

ಸಿನಿಮಾರಂಗದಲ್ಲಿ ಕದ್ದು ಮುಚ್ಚಿ ಮದುವೆಯಾಗುವವರೇ ಹೆಚ್ಚು. ಆದ್ರೆ ''ನಾನು ಮದುವೆ ಆಗ್ತಿದ್ದೀನಿ'' ಅಂತ ಧೈರ್ಯವಾಗಿ ಹೇಳಿಕೊಂಡಿದ್ದ ನಟಿ ನಮಿತಾ ಮನೆಯಲ್ಲಿ ಇದೀಗ ಮದುವೆ ಸಂಭ್ರಮ ಜೋರಾಗಿದೆ. ಸೌತ್ ಸಿನಿ ದುನಿಯಾದಲ್ಲೇ ಸಖತ್ ಸುದ್ದಿ ಮಾಡಿರುವ ನಟಿ ನಮಿತಾ ತನ್ನ ಬಹುದಿನದ ಸ್ನೇಹಿತನ ಜೊತೆ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ಮದುವೆಗೆ ಇನ್ನು ಎರಡು ದಿನಗಳಷ್ಟೇ ಬಾಕಿ ಇದೆ. ಎರಡು ದಿನದ ಹಿಂದೆಯೇ ನಮಿತಾ ನಿವಾಸದಲ್ಲಿ ಮದುವೆ ಸಂಭ್ರಮ ಸಡಗರ ಮನೆ ಮಾಡಿದೆ.ಕಾಲಿವುಡ್ ನ ಹಾಟ್ 'ಬ್ಯೂಟಿ ನಮಿತಾ' ಮದುವೆ ನವೆಂಬರ್ 24 ರಂದು ನಡೆಯಲಿದೆ. ಇನ್ನೆರಡು ದಿನಗಳು ಬಾಕಿ ಇರುವ ಮದುವೆಗೆ ಎಲ್ಲಾ ತಯಾರಿ ನಡೆದಿದ್ದು, ನಟಿ ನಮಿತಾ ಮುಖದಲ್ಲಿ ವಧುವಿನ ಕಳೆ ಬಂದಿದೆ.ನಮಿತಾ ತನ್ನ ಬಾಲ್ಯ ಗೆಳೆಯನಾದ ವೀರೇಂದ್ರ ರವರನ್ನ ಮದುವೆಯಾಗುತ್ತಿದ್ದು, ಇಬ್ಬರ ಮನೆಯಲ್ಲೂ ಒಪ್ಪಿಗೆ ಪಡೆದು ಸಂಪ್ರದಾಯ ಬದ್ಧವಾಗಿ ಮದುವೆ ನಡೆಯುತ್ತಿದೆ. ಈಗಾಗಲೇ ಮೆಹೆಂದಿ ಕಾರ್ಯಕ್ರಮ ನಡೆದಿದ್ದು, ಹಾಟ್ ಬ್ಯೂಟಿ ಕೈತುಂಬ ಮೆಹೆಂದಿ ಹಾಕಿಕೊಂಡು ಸಂತೋಷ ಪಟ್ಟಿದ್ದಾರೆ.

Marriage Preparation in Actress Namitha house.Namitha is married to her childhood friend,.watch this video

Share This Video


Download

  
Report form
RELATED VIDEOS