ಆಮಂತ್ರಣ ಪತ್ರಿಕೆಯಲ್ಲಿ ರೆಡ್ಡಿಗೆ ಸೆಡ್ಡು ಹೊಡೆದ ಶಿವರಾಮೇಗೌಡ್ರು! | Oneindia Kannada

Oneindia Kannada 2017-11-23

Views 12

New wedding Invite of Shivraame gowda's daughter is catching all eyes


ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ತಮ್ಮ ಪುತ್ರಿ ಬ್ರಹ್ಮಿಣಿಯ ಮದುವೆ ಆಮಂತ್ರಣ ಪತ್ರಿಕೆಯನ್ನು ಅದ್ಧೂರಿಯಾಗಿ ಮೂಡಿಬರುವಂತೆ ಮಾಡಿ ಮದುವೆಯನ್ನು ಕೂಡ ಅದ್ಧೂರಿಯಾಗಿ ನೆರವೇರಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೀಗ ರೆಡ್ಡಿಯವರ ವೀಡಿಯೋ ಸಹಿತದ ಆಹ್ವಾನಪತ್ರಿಕೆಯನ್ನೇ ಮಾಜಿ ಶಾಸಕ, ಜೆಡಿಎಸ್ ಮುಖಂಡ ಎಲ್.ಆರ್.ಶಿವರಾಮೇಗೌಡ ಅವರು ಅನುಕರಣೆ ಮಾಡಿದ್ದು, ಮಗಳ ಮದುವೆಯ ಆಹ್ವಾನ ಪತ್ರಿಕೆಯನ್ನು ತೆರೆದ ಕೂಡಲೇ ಕುಟುಂಬವರ್ಗದವರು ಆಹ್ವಾನ ನೀಡುವ ವಿಡಿಯೋ ಮೂಡಿಬರುತ್ತಿದೆ. ಆದರೆ ಇದು ವಿಶೇಷ ಗಣ್ಯರಿಗೆ ಮಾತ್ರವಾಗಿದೆ. ಶಿವರಾಮೇಗೌಡರು ತಮ್ಮ ಪುತ್ರಿ ವಿವಾಹ ಅದ್ಧೂರಿಯಾಗಿ ಮಾಡುತ್ತಿದ್ದು ಆಹ್ವಾನ ಪತ್ರಿಕೆಯಲ್ಲೂ ವಿಶೇಷತೆಯಿರಲಿ ಎಂಬ ಕಾರಣಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಮಾಡಿಸಿದ್ದ ಮಾದರಿಯಲ್ಲೇ ವಿಶೇಷ ವಿಡಿಯೋ ಆಮಂತ್ರಣ ಪತ್ರಿಕೆ ಸಿದ್ಧಪಡಿಸಿದ್ದಾರೆ. ಈ ಆಹ್ವಾನಪತ್ರಿಕೆ ಸಾಮಾಜಿಕಜಾಲ ತಾಣಗಳಲ್ಲಿ ವೈರಲ್ ಆಗಿದೆ.

Janardhan reddy's daughter's wedding invite was talk of the town back then . Now its shivramegowda's turn . And the new video is growing viral

Share This Video


Download

  
Report form
RELATED VIDEOS