ಹೊಚ್ಚ ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚಿದ 'ಸೇಲ್ಸ್ ಮ್ಯಾನ್' ದಿವಾಕರ್ | Filmibeat Kannada

Filmibeat Kannada 2017-11-22

Views 388

ಹೊಚ್ಚ ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚಿದ 'ಸೇಲ್ಸ್ ಮ್ಯಾನ್' ದಿವಾಕರ್.!
ಕಳೆದ ವಾರವಷ್ಟೇ 'ಕೆಂಪೇಗೌಡ' ಸ್ಟೈಲ್ ನಲ್ಲಿ ಮೀಸೆ ಬಿಟ್ಟು ಕಿಚ್ಚ ಸುದೀಪ್ ಗಮನ ಸೆಳೆದಿದ್ದ ದಿವಾಕರ್ ಇದೀಗ ಹೊಸ ಹೇರ್ ಕಟ್ ಮಾಡಿಸಿಕೊಂಡಿದ್ದಾರೆ. 'ಬಿಗ್ ಬಾಸ್' ಮನೆಯೊಳಗೆ ದಿವಾಕರ್ ಗೆ ಹೊಸ ಹೇರ್ ಸ್ಟೈಲ್ ಮಾಡಿದವರು ಬೇರೆ ಯಾರೂ ಅಲ್ಲ, ದಿವಾಕರ್ ಆಪ್ತ ಗೆಳೆಯ ಚಂದನ್ ಶೆಟ್ಟಿ.ಕಿವಿ ಮೇಲ್ಭಾಗದಲ್ಲಿ ಇದ್ದ ಕೂದಲನ್ನ ಟ್ರಿಮ್ ಮಾಡಿ, ನೆತ್ತಿ ಮೇಲಿದ್ದ ಕೂದಲನ್ನ ಹಾಗೇ ಬಿಟ್ಟು, ದಿವಾಕರ್ ಗೆ ಚಂದನ್ ಶೆಟ್ಟಿ ಹೊಸ ಹುರುಪು ನೀಡಿದ್ದಾರೆ. ತಮ್ಮ ಹೇರ್ ಸ್ಟೈಲ್ ನೋಡಿಕೊಂಡು ಖುಷಿ ಪಟ್ಟ ದಿವಾಕರ್, ''ನಾನೊಬ್ಬ ಸೇಲ್ಸ್ ಮ್ಯಾನ್. ಎಂ.ಜಿ.ರೋಡ್ ನಲ್ಲಿ ಈ ತರಹ ಹೇರ್ ಸ್ಟೈಲ್ ಮಾಡಿಕೊಂಡು ಹೋಗುವವರನ್ನ ನೋಡಿದರೆ ನನಗೆ ಇಷ್ಟ ಆಗುತ್ತಿರಲಿಲ್ಲ. ಆದ್ರೆ, ಈಗ ಚಂದನ್ ಶೆಟ್ಟಿ ನನಗೆ ಸ್ಟೈಲ್ ಮಾಡಿದ್ದಾರೆ. ಇದು ನನಗೆ ತುಂಬಾ ಖುಷಿ ಕೊಟ್ಟಿದೆ'' ಎಂದರು.''ನನ್ನ ಗೆಳೆಯನಿಗೆ ನಾನು ಮೊಟ್ಟ ಮೊದಲ ಬಾರಿಗೆ ಹೇರ್ ಸ್ಟೈಲ್ ಮಾಡಿದ್ದೇನೆ. ಫುಟ್ ಬಾಲ್ ಪ್ಲೇಯರ್ ತರಹ ರೆಡಿ ಮಾಡಿದ್ದೇನೆ'' ಎಂದು ಹೊಸ ಲುಕ್ ನಲ್ಲಿದ್ದ ದಿವಾಕರ್ ನ 'ಬಿಗ್ ಬಾಸ್'ಗೆ ಚಂದನ್ ಶೆಟ್ಟಿ ಪರಿಚಯಿಸಿದರು. ಅಂದ್ಹಾಗೆ, ದಿವಾಕರ್ ರವರ ಹೊಸ ಹೇರ್ ಸ್ಟೈಲ್ ಹೇಗಿದೆ.? ನಿಮ್ಮ 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಪೇಜ್ ಲೈಕ್ ಮಾಡಿ, ಕಾಮೆಂಟ್ ಮಾಡಿ....

Bigg Boss Kannada 5: Week 6: Diwakar gets a make over.'Salesman' Divakar shines in new hair style.Divakar's close friend,chandan shetty made a new hair style for Divakar in 'Big Boss' house. ,.watch this video

Share This Video


Download

  
Report form
RELATED VIDEOS