ಹೊಡೆಯಿತು ಬಂಪರ್: ಎರಡು ಲಕ್ಷ ರೂಪಾಯಿ ಬಹುಮಾನ ಪಡೆದ ಜೆಕೆ! 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಜೆಕೆ (ಜಯರಾಂ ಕಾರ್ತಿಕ್) ಗೆ ಬಂಪರ್ ಹೊಡೆದಿದೆ. 'ಬಿಗ್ ಬಾಸ್' ಮನೆಯಲ್ಲಿ ಎರಡು ಲಕ್ಷ ರೂಪಾಯಿಯನ್ನ ಬಹುಮಾನವಾಗಿ ಗೆದ್ದಿದ್ದಾರೆ ಜೆಕೆ. ಅದ್ಹೇಗೆ ಅಂದ್ರೆ, ಅಂತಾರಾಷ್ಟ್ರೀಯ ಪುರುಷ ದಿನದ ಪ್ರಯುಕ್ತ, ಮನೆಯಲ್ಲಿ ಇರುವ ಎಲ್ಲ ಪುರುಷ ಸದಸ್ಯರಿಗೆ 'ಬಿಗ್ ಬಾಸ್' ಒಂದು ವಿಶೇಷ ಚಟುವಟಿಕೆ ನೀಡಿದ್ದರು. ಅದರಲ್ಲಿ ಜೆಕೆ ವಿಜೇತರಾದ ಕಾರಣ, ಅವರಿಗೆ ಬಹುಮಾನದ ರೂಪದಲ್ಲಿ ಬರೋಬ್ಬರಿ ಎರಡು ಲಕ್ಷ ರೂಪಾಯಿ ನೀಡಲಾಗಿದೆ. ಅಂತಾರಾಷ್ಟ್ರೀಯ ಪುರುಷ ದಿನದ ಪ್ರಯುಕ್ತ, ಮನೆಯ ಎಲ್ಲ ಪುರುಷ ಸದಸ್ಯರು ಫೇರ್ ಅಂಡ್ ಹ್ಯಾಂಡ್ಸಮ್ ಲೇಸರ್ 12 ಬಳಸಿ, ಫೇರ್ ಅಂಡ್ ಹ್ಯಾಂಡ್ಸಮ್ ಬ್ಲೇಝರ್ ಗಳನ್ನು ಧರಿಸಿ, ಗಾರ್ಡನ್ ಏರಿಯಾದಲ್ಲಿ ನಿರ್ಮಿಸಲಾಗಿರುವ ವೇದಿಕೆ ಮೇಲೆ Ramp ವಾಕ್ ಮಾಡಿ, ತಮ್ಮ ಪ್ರತಿಭೆಯನ್ನ ಪ್ರದರ್ಶಿಸಬೇಕಿತ್ತು.