ಗುಟ್ಟಾಗಿ ಮದುವೆ ಆಗಿದ್ದಾರಂತೆ ನಟಿ ಅನುಪಮಾ ಗೌಡ.! ಹೌದಾ? 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ ಕಾಲಿಟ್ಟಿದ್ದೇ ತಡ, ಅಷ್ಟು ದಿನ ಸೀರಿಯಲ್ ಲೋಕಕ್ಕೆ ಮಾತ್ರ ಗೊತ್ತಿದ್ದ 'ಅಕ್ಕ' ಅನುಪಮಾ ಗೌಡ ಹಾಗೂ 'ಗಾಂಧಾರಿ' ಜಗನ್ನಾಥ್ ಲವ್ ಕಮ್ ಬ್ರೇಕಪ್ ಸ್ಟೋರಿ... ಇಡೀ ಕರ್ನಾಟಕದಲ್ಲಿ ಜಗಜ್ಜಾಹೀರಾಯ್ತು. 'ಬಿಗ್ ಬಾಸ್' ಮನೆಯಲ್ಲೇ ತಮ್ಮ ಪ್ರೀತಿ ಮುರಿದು ಬಿದ್ದ ಚರಿತ್ರೆಯನ್ನ ಹೇಳುತ್ತಾ ಕಣ್ಣೀರು ಸುರಿಸಿದ್ದ ನಟಿ ಅನುಪಮಾ ಗೌಡಗೆ ಈಗಾಗಲೇ ಮದುವೆ ಆಗಿದ್ಯಂತೆ.! ಹಾಗಂತ ಸ್ವತಃ ಅನುಪಮಾ ಗೌಡ ಹೇಳಿಕೊಂಡಿದ್ದಾರೆ. ಅದು ಕಾಗೆ ಹಾರಿಸುವ ಪ್ರೋಗ್ರಾಮೋ, ಇಲ್ಲ ನಿಜವಾಗಲೂ ಹಾಗೆ ಹೇಳಿದ್ರೋ ನಮಗಂತೂ ಗೊತ್ತಿಲ್ಲ. ಒಟ್ನಲ್ಲಿ, 'ಬಿಗ್ ಬಾಸ್' ಮನೆಯೊಳಗೆ ''ನನಗೆ ಮದುವೆ ಆಗಿದೆ'' ಎಂಬ ಮಾತು ಅನುಪಮಾ ಗೌಡ ಬಾಯಿಂದ ಬಂದಿದೆ. ನಟಿ ಅನುಪಮಾ ಗೌಡ ಮದುವೆಯ ಟಾಪಿಕ್ ಶುರು ಆಗಿದ್ದು ರಿಯಾಝ್ ರಿಂದ. ಅನುಪಮಾ ಗೌಡಗೆ ಮದುವೆ ಆಗಿದೆ ಎಂದು ರಿಯಾಝ್ ಅಂದುಕೊಂಡಿದ್ದರಂತೆ.