Kirik Keerthi, Shalini, Sheethal Shetty & Niranjan Deshpande to enter Bigg Boss Kannada 5 house as special guests.
ಇಂದಿನಿಂದ 'ಬಿಗ್ ಬಾಸ್' ನಲ್ಲಿ ಸ್ಪೆಷಲ್ ಗೆಸ್ಟ್ ಗಳ ಎಂಟ್ರಿ! 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ನಿನ್ನೆಯಷ್ಟೆ ಸೆಲೆಬ್ರಿಟಿ ಲಿಸ್ಟ್ ನಲ್ಲಿದ್ದ ಕೃಷಿ ತಾಪಂಡ ಎಲಿಮಿನೇಟ್ ಆಗಿದ್ದಾರೆ. ಕೃಷಿ ಹೊರ ಬರ್ತಿದ್ದಂತೆ ಈಗ 'ಬಿಗ್ ಬಾಸ್' ಗೆ ಹೊಸ ಸ್ಪರ್ಧಿಗಳ ಎಂಟ್ರಿ ಆಗಲಿದ್ಯಂತೆ. ಈ ತರಹದ ಸುದ್ದಿಯೊಂದು ಸದ್ಯ ಹರಿದಾಡುತ್ತಿದ್ದು, ಈ ವಾರದಲ್ಲಿ ಮೂರು ಸ್ಪರ್ಧಿಗಳನ್ನ 'ಬಿಗ್ ಬಾಸ್' ಮನೆಯೊಳಗೆ ಕಳುಹಿಸಲಾಗುತ್ತಂತೆ. ಈ ಹಿಂದೆ 'ಬಿಗ್ ಬಾಸ್' ಮನೆಯಲ್ಲಿದ್ದು, ಪ್ರೇಕ್ಷಕರಿಗೆ ಸಖತ್ ಮನೋರಂಜನೆ ನೀಡಿದ್ದ ಸ್ಪರ್ಧಿಗಳನ್ನ ಒಳಗೆ ಕಳುಹಿಸಲು ತಯಾರಿ ನಡೆದಿದೆ.'ಬಿಗ್ ಬಾಸ್' ರಿಯಾಲಿಟಿ ಶೋ ನಲ್ಲಿ ಐದು ವಾರಗಳು ಕಳೆದ ನಂತರ ಸೀಕ್ರೆಟ್ ರೂಂನಲ್ಲಿ ಸ್ಪರ್ಧಿಗಳನ್ನ ಕಳುಹಿಸುವುದು ಹಿಂದಿನ ಸೀಸನ್ ನಿಂದ ನಡೆದುಕೊಂಡು ಬಂದಿದೆ. ಈ ಬಾರಿ ವಿಶೇಷವಾಗಿ ಗೆಸ್ಟ್ ಗಳಾಗಿ ಹಳೆಯ ಸ್ಪರ್ಧಿಗಳನ್ನ ಕಳುಹಿಸಲಾಗುತ್ತಿದೆ. ಮೊದಲ ಗೆಸ್ಟ್ ಆಗಿ ಕಳೆದ ಬಾರಿಯ ಶೋ ರನ್ನರ್ ಅಪ್ ಕಿರಿಕ್ ಕೀರ್ತಿಯನ್ನ ಕಳುಹಿಸಲಿದ್ದಾರಂತೆ.