ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಮೊದಲೆರಡು ವಾರ ಸೆಲೆಬ್ರಿಟಿ ಸ್ಪರ್ಧಿಗಳೆಲ್ಲ ದಿವಾಕರ್ ವಿರುದ್ಧ ಇದ್ದಾಗ, ದಿವಾಕರ್ ಪರ ದನಿ ಎತ್ತಿದವರು ರಿಯಾಝ್.ಇದೀಗ ಅದೇ ದಿವಾಕರ್ ಮತ್ತು ರಿಯಾಝ್ ನಡುವೆ ಎಲ್ಲವೂ ಸರಿ ಇಲ್ಲ ಎಂಬಂತಾಗಿದೆ. ದಿವಾಕರ್ ಪರ ರಿಯಾಝ್ ನಿಂತ ಮೇಲೆ... ದಿವಾಕರ್ ಗೆ ಸುದೀಪ್ ಕೆಲ ಟಿಪ್ಸ್ ಹೇಳಿದ್ಮೇಲೆ... ದಿವಾಕರ್ ಬದಲಾದರು. ಸೆಲೆಬ್ರಿಟಿ ಸ್ಪರ್ಧಿಗಳ ಜೊತೆ ಬೆರೆಯಲು ಶುರು ಮಾಡಿದರು.
ಸೆಲೆಬ್ರಿಟಿ ಸ್ಪರ್ಧಿಗಳ ಕಣ್ಣಿಗೆ ದಿವಾಕರ್ ಈಗ ಒಳ್ಳೆಯವರಾಗಿ ಕಾಣುತ್ತಿದ್ದಾರೆ. ದಿವಾಕರ್ ಪರ ದನಿ ಎತ್ತಿದ ರಿಯಾಝ್ ಮಾತ್ರ ಸೆಲೆಬ್ರಿಟಿ ಸ್ಪರ್ಧಿಗಳ ಕಣ್ಣಿಗೆ ಅಷ್ಟಕಷ್ಟೆ.ಸೆಲೆಬ್ರಿಟಿ ಸ್ಪರ್ಧಿಗಳ ಜೊತೆ ದಿವಾಕರ್ ಚೆನ್ನಾಗಿ ಇರುವ ಕಾರಣ, ದಿವಾಕರ್ ಹಾಗೂ ರಿಯಾಝ್ ಮಧ್ಯೆ ಕಂದಕ ಮೂಡಿದ್ಯಾ.? 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ದಿವಾಕರ್ ಹಾಗೂ ರಿಯಾಝ್ ಬಗ್ಗೆ ಸುದೀಪ್ ಹೇಳಿದ್ದೇನು.? ಸಂಪೂರ್ಣ ವಿವರ ಇಲ್ಲಿದೆ ಓದಿರಿ.''ತಾನು ಕೂತಿರುವ ರೆಂಬೆಯನ್ನೇ ದಿವಾಕರ್ ಕತ್ತರಿಸುತ್ತಾನೆ. ಇದೇ ನನಗೆ ಅವನ (ದಿವಾಕರ್) ಬಗ್ಗೆ ಇಷ್ಟ ಆಗಲ್ಲ. ಮೊದಲ ವಾರದಿಂದ ಅವನ ಕೈಹಿಡಿದಿದ್ದು ನಾನು. ಇಡೀ ಮನೆ ಅವನ ವಿರುದ್ಧ ನಿಂತಿದ್ದಾಗ, ಅವರ ಪರ ನಿಂತಿದ್ದು ನಾನು. ಆದ್ರೆ, ಎಲ್ಲರ ದೃಷ್ಟಿಯಲ್ಲಿ ನಾನು ಕೆಟ್ಟವನಾದೆ. ಅವನು ಒಳ್ಳೆಯವನಾದ. ಅವನಿಗೆ ಓವರ್ ಕಾನ್ಫಿಡೆನ್ಸ್ ಜಾಸ್ತಿ ಆಗಿದೆ'' ಎಂದು ಚಂದನ್ ಶೆಟ್ಟಿ ಜೊತೆ ಮಾತನಾಡುವಾಗ ರಿಯಾಝ್ ಬೇಸರ ಮಾಡಿಕೊಂಡರು