ಕನ್ನಡ ಸಿನಿಮಾರಂಗದಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಅಂತಲೇ ಫೇಮಸ್ ಆಗಿರುವ 'ಡಿ ಬಾಸ್' ದರ್ಶನ್ ಯೂಟ್ಯೂಬ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ರಾಜ್ಯಾದ್ಯಂತ ಮೂಲೆ ಮೂಲೆಯಲ್ಲೂ ಅಭಿಮಾನಿ ಬಳಗವನ್ನ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ರ 'ಜಗ್ಗುದಾದಾ' ಸಿನಿಮಾ ಮೂಲಕ ಹೊಸ ಅಲೆಯನ್ನ ಸೃಷ್ಟಿ ಮಾಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಖ್ಯಾತಿ ಪಡೆದುಕೊಂಡು ಸಖತ್ತಾಗಿ ಕಲೆಕ್ಷನ್ ಮಾಡಿದ ರಾಘವೇಂದ್ರ ಹೆಗ್ಡೆ ನಿರ್ದೇಶನದ 'ಜಗ್ಗುದಾದಾ' ಸಿನಿಮಾ ಹಿಂದಿ ಭಾಷೆಗೆ ಡಬ್ ಆಗಿದೆ. ಕನ್ನಡದಲ್ಲಿ ಇರುವಷ್ಟು ಅಭಿಮಾನಿಗಳು ಹಿಂದಿಯಲ್ಲಿ ದರ್ಶರ್ ರಿಗೆ ಇರಲಿಕ್ಕಿಲ್ಲ ಅಂತ ಏನಾದರೂ ಊಹೆ ಮಾಡಿದ್ರೆ ಅದು ತಪ್ಪು. ಯಾಕಂದ್ರೆ, ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯದಲ್ಲೂ 'ಡಿ ಬಾಸ್' ಗೆ ಹೆಚ್ಚು ಅಭಿಮಾನಿಗಳಿದ್ದಾರೆ ಅನ್ನೋದು ಈ ಮೂಲಕ ತಿಳಿದು ಬಂದಿದೆ
Darshan sets a new record and this time its on youtube. watch the video to know what is it about