CM Siddaramaiah thinking of banning liquor in Karnataka. ahead of elections banning liquor may help congress. from banning liquor Karnataka will loose 1800 crore income.
ಕರ್ನಾಟಕದಲ್ಲಿ ಬಂದ್ ಆಗಲಿವೆಯೇ ಬಾರ್‌ಗಳು? ಮುಂಬರುವ ಚುನಾವಣೆ ಗೆಲ್ಲಲು ಸಿದ್ದರಾಮಯ್ಯ ಅವರು ಹೊಸ ಪ್ಲಾನ್ ಮಾಡಿದ್ದು ಬಿಹಾರ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ಮದ್ಯ ನಿಷೇಧ ಮಾಡುವ ಕುರಿತು ಗಂಭೀರ ಚಿಂತನೆ ನಡೆಸುತ್ತಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಬಿಹಾರದಲ್ಲಿ ಮದ್ಯ ನಿಷೇಧ ಮಾಡಿದ್ದು ಆರ್ಥಿಕವಾಗಿ ರಾಜ್ಯಕ್ಕೆ ನಷ್ಟವುಂಟುಮಾಡಿದರೂ ಸಹ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ರಾಜ್ಯದ ಜನರಿಂದ ಉತ್ತಮ ಪ್ರಶಂಸೆ ಕೇಳಿ ಬಂದಿತ್ತು. ಅದರಲ್ಲಿಯೂ ಬಿಹಾರದ ಮಹಿಳೆಯರಿಂದ ನಿತೀಶ್ ಅವರ ನಿರ್ಧಾರಕ್ಕೆ ಭಾರಿ ಬೆಂಬಲ ವ್ಯಕ್ತವಾಗಿತ್ತು.ಮದ್ಯ ನಿಷೇಧ ಯೋಜನೆ ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ವರ್ಚಸ್ಸು ಏರಲು ಸಹಕಾರಿಯಾಗಿತ್ತು. ಹೀಗಾಗಿ ಸಿದ್ದರಾಮಯ್ಯನವರೂ ಮದ್ಯ ನಿಷೇಧವನ್ನು ರಾಜ್ಯದಲ್ಲಿ ಜಾರಿ ತರಲು ಉದ್ದೇಶಿಸಿದ್ದು ಮಹಿಳಾ ಮತದಾರರನ್ನು ಸೆಳೆಯುವ ಯೋಚನೆ ಮಾಡಿದ್ದಾರೆ. ಮದ್ಯ ನಿಷೇಧ ಯೋಜನೆ ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ವರ್ಚಸ್ಸು ಏರಲು ಸಹಕಾರಿಯಾಗಿತ್ತು. ಹೀಗಾಗಿ ಸಿದ್ದರಾಮಯ್ಯನವರೂ ಮದ್ಯ ನಿಷೇಧವನ್ನು ರಾಜ್ಯದಲ್ಲಿ ಜಾರಿ ತರಲು ಉದ್ದೇಶಿಸಿದ್ದು ಮಹಿಳಾ ಮತದಾರರನ್ನು ಸೆಳೆಯುವ ಯೋಚನೆ ಮಾಡಿದ್ದಾರೆ.ಹಿಂದೆ ರಾಜ್ಯದ ಸಮಿತಿಯೊಂದು ಬಿಹಾರಕ್ಕೆ ತೆರಳಿ ಮದ್ಯ ನಿಷೇದದ ಬಗ್ಗೆ ಅಧ್ಯಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.