'ಉಪೇಂದ್ರ ಮತ್ತೆ ಬಾ' ಸಿನಿಮಾ... ಉಪೇಂದ್ರ ರಾಜು(ಉಪೇಂದ್ರ) ಕುಟುಂಬದ ಕಥೆ. ಶಿವಪುರ ಎನ್ನುವ ಊರಿನ ದೇವಸ್ಥಾನ ಮೂಲಕ ಚಿತ್ರದ ಕಥೆ ತೆರೆದುಕೊಳ್ಳುತ್ತದೆ. ಉಪೇಂದ್ರ ರಾಜು ಕುಟುಂಬ, ಊರಿನ ದೊಡ್ಡ ಕುಟುಂಬ. ಆತನ ಮಗ ರಾಮು(ಉಪೇಂದ್ರ). ಮಗ ಹುಟ್ಟುವುದಕ್ಕೂ ಮುನ್ನವೇ ತಂದೆ ಅಪಘಾತದಲ್ಲಿ ನಿಧನರಾಗಿರುತ್ತಾನೆ. ವಿದೇಶದಲ್ಲಿ ಬೆಳೆದ ರಾಮು ಮತ್ತೆ ಆತನ ಪತ್ನಿ ಸೀತಾ (ಶೃತಿ ಹರಿಹರನ್) ವಿಚ್ಛೇದನಕ್ಕಾಗಿ ತಮ್ಮ ಹಳ್ಳಿಗೆ ಬರುತ್ತಾರೆ. ಆ ನಂತರ ಅಪ್ಪ ಉಪೇಂದ್ರ ರಾಜು ಆತ್ಮವಾಗಿ ಆಗಾಗ ರಾಮು ಮೇಲೆ ಬಂದು ಆತನ ಕುಟುಂಬವನ್ನು ಒಂದು ಮಾಡುವುದಕ್ಕೆ ಪ್ರಯತ್ನ ಮಾಡುತ್ತಾನೆ. ಮಗನ ಜೀವನವನ್ನು ಮಾತ್ರವಲ್ಲದೆ ಕೊನೆಗೆ ಆತನ ಜೀವವನ್ನು ಸಹ ಉಪೇಂದ್ರ ರಾಜು ಕಾಪಾಡುತ್ತಾನೆ. ಇದು ಚಿತ್ರದ ಕಥೆ. ಇಡೀ ಚಿತ್ರದ ಕಥೆಯ ಸತ್ವ ಈ ಅಂಶಗಳಲ್ಲಿ ಅಡಗಿದೆ. ಹೀಗಾಗಿ, ಅದನ್ನು ತೆರೆ ಮೇಲೆ ನೋಡಬೇಕು.
'upendra matte baa' cinema.. Upendra raju's (upendra) family story . But not the stereotype family drama . One main attraction in the movie is Upendra's acting. Watch the movie to unfold the story .