Darshan to clap for his sister's upcoming Kannada Movie 'Hikora'.
ಸಹೋದರಿ ಚಿತ್ರಕ್ಕೆ ಕ್ಲಾಪ್ ಮಾಡಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್. 'ಚಾಲೆಂಜಿಂಗ್ ದರ್ಶನ್' ಅಂದ್ರೇನೇ ಹಾಗೆ... ತಮ್ಮವರ ಹಾಗೂ ತನ್ನ ಸುತ್ತ ಮುತ್ತಲಿನವರ ಏಳಿಗೆಗೆ ಶ್ರಮಿಸೋದು ಹಾಗೂ ಅವರ ಕಷ್ಟಕ್ಕೆ ಬೆನ್ನಿಗೆ ನಿಲ್ಲೋದು ಅವರ ಕಾಯಕ. ಅದಷ್ಟೇ ಅಲ್ಲದೆ ಸಿನಿಮಾರಂಗದಲ್ಲಿ ಬೆಳೆಯುತ್ತಿರುವ ಕಲಾವಿದರಿಗೆ ಪ್ರೋತ್ಸಾಹ ನೀಡೋದನ್ನೂ ಕೂಡ ದರ್ಶನ್ ಹಿಂದಿನಿಂದಲೂ ಬೆಳೆಸಿಕೊಂಡು ಬಂದಿದ್ದಾರೆ. ಸದ್ಯ ದರ್ಶನ್ ತಮ್ಮ ಸಹೋದರಿ ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ಕ್ಲಾಪ್ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಅಕ್ಕ ಪ್ರೊಡ್ಯೂಸ್ ಮಾಡ್ತಿರೋ ಚಿತ್ರಕ್ಕೆ ಬೆನ್ನೆಲುಬಾಗಿ ನಿಲ್ಲಲ್ಲಿದ್ದಾರೆ. ಅರೇ... ದರ್ಶನ್ ಸಹೋದರಿ ಸಿನಿಮಾರಂಗಕ್ಕೆ ಪ್ರವೇಶ ಮಾಡ್ತಿದ್ದಾರಾ ಅಂತ ಆಲೋಚನೆ ಮಾಡಬೇಡಿ. ನಾವು ಹೇಳ್ತಿರೋದು ದರ್ಶನ್ ಅವರ ಸ್ವಂತ ಸಹೋದರಿಯ ಬಗ್ಗೆ ಅಲ್ಲಾ, ಮತ್ಯಾರು ? ರತ್ನ ಶ್ರೀಧರ್.... 'ದರ್ಶನ್' ನೀನಾಸಂ ನಲ್ಲಿ ತರಬೇತಿ ಪಡೆಯುತ್ತಿದ್ದಾಗ ಕ್ಯಾಂಟೀನ್ ನಲ್ಲಿ ಅಡುಗೆ ಮಾಡುತ್ತಿದ್ದ ಮಹಿಳೆ, ದರ್ಶನ್ ರನ್ನ ಅತೀ ಪ್ರೀತಿಯಿಂದ ನೋಡಿಕೊಳ್ತಿದ್ದ 'ರತ್ನ ಶ್ರೀಧರ್' ಅವ್ರನ್ನ ದರ್ಶನ್ ಇಂದಿಗೂ ಅಕ್ಕನಾಗಿಯೇ ನೋಡುತ್ತಾರೆ.