ಬಾಹುಬಲಿ ಪ್ರಭಾಸ್ ಅಪ್ಪಟ ಅಭಿಮಾನಿ ಮಾಡಿರೋ ಕೆಲಸ ನೋಡಿ | FIlmibeat Kannada

Filmibeat Kannada 2017-11-17

Views 3.4K

Crazy female fans of Prabhas get Baahubali picture painted on their bare back.

ಯುವತಿಯ ಬೆನ್ನ ಮೇಲೆ 'ಅಮರೇಂದ್ರ ಬಾಹುಬಲಿ' ಮಿಂಚಿಂಗ್! ತೆಲುಗಿನ ಡಾರ್ಲಿಂಗ್ ಪ್ರಭಾಸ್ ಅಭಿನಯದ 'ಬಾಹುಬಲಿ' ಚಿತ್ರ ಸೂಪರ್ ಹಿಟ್ ಆಗಿದ್ದು ಈಗ ಇತಿಹಾಸ. ಆದ್ರೆ, ಈ ಸಿನಿಮಾದ ಕ್ರೇಜ್ ಇನ್ನು ಕಮ್ಮಿಯಾಗಿಲ್ಲ ಎನ್ನುವುದಕ್ಕೆ ತಾಜಾ ಉದಾಹರಣೆ ಸಿಕ್ಕಿದೆ. ಅದರಲ್ಲೂ ಪ್ರಭಾಸ್ ಅವರ ಮಹಿಳಾ ಅಭಿಮಾನಿಗಳ ಕ್ರೇಜ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಹೌದು, ಯುವತಿಯೊಬ್ಬರು ತನ್ನ ಅರೆ ನಗ್ನ ಬೆನ್ನ ಮೇಲೆ ಬಾಹುಬಲಿ ಚಿತ್ರದ ಅಮರೇಂದ್ರ 'ಬಾಹುಬಲಿ'ಯ (ಪ್ರಭಾಸ್) ಚಿತ್ರವನ್ನ ಪೇಯಿಂಟಿಂಗ್ ಮೂಲಕ ಬಿಡಿಸಿಕೊಂಡಿದ್ದಾರೆ.ಈ ಅಭಿಮಾನಿಯ ಚಿತ್ರ ಈಗ ಫೇಸ್ ಬುಕ್, ಟ್ವಿಟ್ಟರ್, ಸೇರಿದಂತೆ ಎಲ್ಲ ಕಡೆ ವೈರಲ್ ಆಗಿದ್ದು, ಪ್ರಭಾಸ್ ಅಭಿಮಾನಿ ಬಳಗ ಫುಲ್ ಖುಷಿಯಾಗಿದೆ. ಮತ್ತೊಂದೆಡೆ ಯುವತಿಯ ಈ ಅಭಿಮಾನದ ಬಗ್ಗೆ ಟೀಕೆಗಳು ಕೂಡ ವ್ಯಕ್ತವಾಗುತ್ತಿದೆ.ಇದಕ್ಕು ಮುಂಚೆ ಇದೇ ರೀತಿ ಅರೆ ನಗ್ನ ಬೆನ್ನ ಮೇಲೆ ಚಿಟ್ಟೆಯ ಜೊತೆ ಪ್ರಭಾಸ್ ಹೆಸರು ಬಿಡಿಸಿಕೊಂಡಿದ್ದ ವಿಡಿಯೋ ಕೂಡ ಯ್ಯೂಟ್ಯೂಬ್ ನಲ್ಲಿ ಹರಿದಾಡಿತ್ತು.

Share This Video


Download

  
Report form
RELATED VIDEOS