ಅಚ್ಚರಿ: ಸುದೀಪ್ 'ಪೈಲ್ವಾನ್' ಮುಂದಿನ ತಿಂಗಳು ತೆರೆಗೆ! 'ಪೈಲ್ವಾನ್'... ಕಿಚ್ಚ ಸುದೀಪ್ ಅಭಿನಯದ, 'ಗಜಕೇಸರಿ' ಕೃಷ್ಣ ನಿರ್ದೇಶನದ ಸಿನಿಮಾ. ಫಸ್ಟ್ ಲುಕ್ ರಿಲೀಸ್ ಮಾಡಿ ಸಿನಿಮಾ ಪ್ರೇಕ್ಷಕರ ಕುತೂಹಲ ಕೆರಳಿಸಿರುವ 'ಪೈಲ್ವಾನ್' ಸಿನಿಮಾ ಮುಂದಿನ ತಿಂಗಳು ತೆರೆಗೆ ಬರುತ್ತಿದೆ.! ಏನು... 'ಪೈಲ್ವಾನ್' ಸಿನಿಮಾ ಮುಂದಿನ ತಿಂಗಳು ತೆರೆಗೆ ಬರ್ತಿದ್ಯಾ.? ಆಶ್ಚರ್ಯ ಪಡಬೇಡಿ ಹಾಗಂತ ಹೇಳ್ತಿರೋದು ನಾವಲ್ಲ.! ಬದಲಾಗಿ ಬುಕ್ ಮೈ ಶೋ ವೆಬ್ ತಾಣ. ಹೌದು ಬುಕ್ ಮೈ ಶೋ ಮತ್ತೊಂದು ಎಡವಟ್ಟು ಮಾಡಿದೆ. 'ಪೈಲ್ವಾನ್' ಸಿನಿಮಾ ಡಿಸೆಂಬರ್ 2017ಕ್ಕೆ ರಿಲೀಸ್ ಆಗಲಿದೆ ಎಂದು ತಮ್ಮ ವೆಬ್ ಸೈಟ್ ನಲ್ಲಿ ಹಾಕಿಕೊಂಡಿದ್ದಾರೆ. ಈಗಾಗಲೇ ಸಾಕಷ್ಟು ಬಾರಿ ಇದೇ ರೀತಿ ತಪ್ಪುಗಳನ್ನ ಮಾಡಿರೋ ಬುಕ್ ಮೈ ಶೋ ತಂಡ ಈಗ 'ಪೈಲ್ವಾನ್' ಸಿನಿಮಾವನ್ನ ಮುಂದಿನ ತಿಂಗಳು ರಿಲೀಸ್ ಮಾಡುವುದಾಗಿ ತಮ್ಮ ವೆಬ್ ಸೈಟ್ ನಲ್ಲಿ ಹಾಕಿಕೊಂಡಿದೆ. ಫೋಟೋ ಶೂಟ್ ನಷ್ಟೇ ಮುಗಿಸಿರುವ ಈ ಚಿತ್ರ 'ಪೈಲ್ವಾನ್' ಅದು ಹೇಗೆ ಇಷ್ಟು ಬೇಗ ರಿಲೀಸ್ ಆಗುತ್ತೆ ಅನ್ನೋದು ಅಭಿಮಾನಿಗಳಿಗೆ ಕಾಡುತ್ತಿರೋ ಯಕ್ಷ ಪ್ರಶ್ನೆಯಾಗಿದೆ.
Sudeep starrer 'Pailwan' to release in December as per Book My show website.