Karnataka Private Doctors Strike on KPME Bill : ಸಮಸ್ಯೆ ಬಗೆಹರಿಸಲು ಸಮಯದ ಗಡುವು ಕೊಟ್ಟ ಹೈ ಕೋರ್ಟ್

Oneindia Kannada 2017-11-16

Views 410

The Karnataka High Court sets deadline to solve Doctors protest issue. PIL filed against doctors protest. Doctor protesting against proposed amendments to the Karnataka Private Medical Establishments Act, 2017.


'ವೈದ್ಯೋ ನಾರಾಯಣೋ ಹರಿಃ' ಎಂದು ಜೀವ ಉಳಿಸುವ ವೈದ್ಯರನ್ನು ದೇವರಿಗೆ ಹೋಲಿಸುವ ಸಂಸ್ಕೃತಿ ನಮ್ಮದು. ಆದರೆ ಕಳೆದ ಮೂರು ದಿನಗಳಿಂದ ಹಟಕ್ಕೆ ಕಟ್ಟುಬಿದ್ದ ವೈದ್ಯರು ಮತ್ತು ಸರ್ಕಾರದ ನಡುವಲ್ಲಿ ಅಡಕತ್ತರಿಯಲ್ಲಿ ಸಿಕ್ಕ ಅಡಿಕೆಯಂತಾದ ಜನಸಾಮಾನ್ಯರ ಪಾಡು ಮಾತ್ರ ಆ ದೇವರಿಗೂ ಅರ್ಥವಾಗದಿರುವುದು ದುರಂತ! 15ಕ್ಕೂ ಹೆಚ್ಚು ಅಮಾಯಕರ ಸಾವಿಗೆ ಹೊಣೆ ಯಾರು? ಖಾಸಗಿ ಆಸ್ಪತ್ರೆಗಳ ದುಬಾರಿ ಬಿಲ್ಲು ಮತ್ತು ಇತ್ತೀಚೆಗೆ ಖಾಸಗಿ ಆಸ್ಪತ್ರೆಗಳಲ್ಲಿ ನಡೆದ ಹಲವು ಅಹಿತಕರ ಘಟನೆಗಳನ್ನು ಮನಗಂಡು, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ(ಕೆಪಿಎಂಇ) ತಿದ್ದುಪಡಿ ಮಸೂದೆ 2017 ಅನ್ನು ಜಾರಿಗೆ ತರಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ವೈದ್ಯರ ಮುಷ್ಕರ : 2.30ರ ಗಡುವು ಕೊಟ್ಟ ಹೈಕೋರ್ಟ್. ಕರ್ನಾಟಕ ಸರ್ಕಾರ ಮತ್ತು ಪ್ರತಿಭಟನೆ ನಡೆಸುತ್ತಿರುವ ವೈದ್ಯರಿಗೆ ಛೀಮಾರಿ ಹಾಕಿರುವ ಹೈಕೋರ್ಟ್ ತಕ್ಷಣ ಸಮಸ್ಯೆ ಬಗೆಹರಿಸಬೇಕು ಎಂದು ಸೂಚನೆ ನೀಡಿದೆ. ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಗುರುವಾರ ನಡೆಸಿದ ಹೈಕೋರ್ಟ್, ಮಧ್ಯಾಹ್ನ 2.30ರೊಳಗೆ ಸಮಸ್ಯೆ ಬಗೆಹರಿಸುವಂತೆ ನಿರ್ದೇಶನ ನೀಡಿದೆ.

Share This Video


Download

  
Report form
RELATED VIDEOS